ಈ ಬಾರಿಯ 217ನೇ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಮಾಹಿತಿಯನ್ನ ಹಾಗೂ ರಾಮಾಯಣದ ಕಾಲಕೃತಿಗಳ ಮೂಲಕ ಸಾರ್ವಜನಿಕರಿಗೆ ಸಂದೇಶ ನೀಡಲು ಲಾಲ್ ಬಾಗ್ ಸಜ್ಜಾಗಿದೆ.
ಬೆಂಗಳೂರು: ಈ ಬಾರಿಯ 217ನೇ ವರ್ಷದ ಗಣರಾಜ್ಯೋತ್ಸವಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಪರಿಕಲ್ಪನೆಯಡಿ ವಿಶೇಷ ರೀತಿಯಲ್ಲಿ, ಜನವರಿ 16 ರಿಂದ 27ರ ವರೆಗೆ 12 ದಿನಗಳ ಕಾಲ
ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನ ಲಾಲ್‌ಬಾಗ್ ನಲ್ಲಿ ಆಯೋಜಿಸಲಾಗಿದ್ದು, ಮುಖ್ಯವಾಗಿ ಗಾಜಿನ ಮನೆಯ ಒಳಾಂಗಣದ ವಿಶೇಷಗಳ ಬಗ್ಗೆ ತೋಟಗಾರಿಕಾ ಇಲಾಖೆ ಹೆಚ್ಚಿನ ಗಮನಹರಿಸಿದೆ. ಇನ್ನು ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ಮಕ್ಕಳಿಗೆ 30 ರೂ, ರಜಾ ದಿನಗಳಲ್ಲಿ ವಯಸ್ಕರಿಗೆ 100 ರೂಗಳನ್ನ ತೋಟಗಾರಿಕಾ ಇಲಾಖೆ ನಿಗಧಿ ಮಾಡಿದೆ.
ಗಾಜಿನ ಮನೆಯ ಒಳಾಂಗಣದ ವಿಶೇಷಗಳು:
*ಗಾಜಿನ ಮನೆಯ ಪ್ರದೇಶದಲ್ಲಿ ಇಂಡೋ- ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂ ಜೋಡಣೆ ಮತ್ತು ಮಹರ್ಷಿ ವಾಲ್ಮೀಕಿ ಅವರ ಪುತ್ಹಳಿ ಇರಲಿದೆ.
*ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ ಕಲಾಕೃತಿ ಮುಂದೆ ಮಹರ್ಷಿ ವಾಲ್ಮೀಕಿ ಪ್ರತಿಮೆ ಇರಲಿದೆ.
- ಗಾಜಿನ ಮನೆಯ ಕೇಂದ್ರಭಾಗದ ಎಡಬದಿಗೆ ಮಹರ್ಷಿ ವಾಲ್ಮೀಕಿಯವರ ಆಶ್ರಮದ ಪುಷ್ಪ ಮಾದರಿ ಮತ್ತು ರಾಮಾಯಣ ರಚನೆಗೆ ಕಾರಣವಾದ ಸನ್ನಿವೇಶದ ಪ್ರದರ್ಶನ ಮಾಡಲಾಗಿದೆ.
- ಹನುಮ ಜಾಂಬವಂತ ಜಟಾಯು ಅಳಿಲು ಕಲಾಕೃತಿಗಳ ಅನಾವರ ಮಾಡಲಾಗಿದೆ.
- ಹತ್ತು ಆಕರ್ಷಕ ಪುಷ್ಪ ಪಿರಮಿಡ್ಡುಗಳ ಮತ್ತು ವಾಲ್ಮೀಕಿ ಹಾಗೂ ರಾಮಾಯಣದ ಪಾತ್ರಧಾರಿಗಳ ಚಿತ್ರಗಳ ಪ್ರದರ್ಶನಕ್ಕೆ ಇಡಲಾಗಿದೆ.
ಗಾಜಿನ ಮನೆಯ ಹೊರಾಂಗಣದ ವಿಶೇಷಗಳು:
*ಎಲ್ಇಡಿ ಸ್ಕ್ರೀನ್ ಗಳನ್ನು ಬಳಸಿ ಲಾಲ್ ಬಾಗ್ ನ ಆಯ್ದ ಹತ್ತು ಜಾಗಗಳಲ್ಲಿ ಮಹರ್ಷಿ ವಾಲ್ಮೀಕಿ ಬದುಕು ಸಾಧನೆ ಮತ್ತು ಸಂದೇಶಗಳ ಜೊತೆಯಲ್ಲಿ ರಾಮಾಯಣದ ಮಾಹಾಕಾವ್ಯದ ಹೆಗ್ಗಳಿಕೆಯನ್ನು ಸಾರುವ ವಿಡಿಯೋ ತುಣುಕುಗಳು, ಚಿತ್ರಗಳು, ಫಲಪುಷ್ಪ ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿದೆ.
- ರೆಡ್ ಸಾಲ್ವಿಯಾ, ಟೂರೇನಿಯಂ, ಇಂಪೇಷನ್ಸ್,
ಮತ್ತು ಪೆಟೂನಿಯಾ ಹೂಕುಂಡಗಳನ್ನು ಬಳಸಿ
ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ – ನವಿಲು ಪ್ರದರ್ಶನಕ್ಕೆ ಇಡಲಾಗಿದೆ.
*ಲಾಲ್‌ಬಾಗ್ ನ 4 ಪ್ರವೇಶ ದ್ವಾರಗಳ ಬಳಿ ವರ್ಟಿಕಲ್ ಗಾರ್ಡನ್ ನಿಂದ ರೂಪಿತವಾಗುವ ಸ್ವಾಗತ ಕಮಾನುಗಳು ಇರಲಿವೆ. - ಸಸ್ಯಸಂತೆ, ತೂಗುವ ಹೂಗಳು, ಹೃದಯಾಕಾರದ ಹೂವಿನ ಕಮಾನುಗಳು ಇರಲಿವೆ.
ತೋಟಗಾರಿಕಾ ಇಲಾಖೆ ವತಿಯಿಂದ 217 ನೇ ವರ್ಷದ ವಿಶೇಷ ಫಲಪುಷ್ಪ ಪ್ರದರ್ಶನವನ್ನ ನಾಳೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಲ್ಲಿಕಾರ್ಜುನ್ ಅವರು ಚಾಲನೆ ನೀಡಲಿದ್ದಾರೆ. ಈ ಹಿಂದೆ ತೋಟಗಾರಿಕಾ ಇಲಾಖೆಯಿಂದ ನಾಡಪ್ರಭು ಕೆಂಪೇಗೌಡ, ಅಂಬೇಡ್ಕರ್ ಸೇರಿದಂತೆ ಹಲವು ಮಹಾನೀಯರ ಫಲಪುಷ್ಪ ಪ್ರದರ್ಶನವನ್ನ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.
ವಿವಿಧ ರೀತಿಯ ಹೂಗಳ ಬಳಕೆ:
ಈ ಬಾರಿಯ ಫಲಪುಷ್ಪ ಪ್ರದರ್ಶಕ್ಕೆ 85 ರೀತಿಯ ಹೂಗಳ ಬಳಕೆ ಮಾಡಲಾಗಿದೆ. 32 ಲಕ್ಷ ಹೂಗಳಿಂದ
ವಿಶೇಷವಾಗಿ ಮಹರ್ಷಿ ವಾಲ್ಮೀಕಿಯವರು ಕಲಾಕೃತಿಗಳನ್ನ ನಿರ್ಮಾಣ ಮಾಡಲಾಗಿದೆ.
10 ಲಕ್ಷಕ್ಕು ಹೆಚ್ಚಿನ ಜನ ಬರುವ ನಿರೀಕ್ಷೆ:
ಕಳೆದ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ 5.61 ಲಕ್ಷ ವೀಕ್ಷಕರು ಭೇಟಿ ನೀಡಿದ್ದರು,
ಕಳೆದ ಬಾರಿ 3 ಕೋಟಿ ಹಣ ಸಂಗ್ರಹ ಆಗಿತ್ತು. ಈ ಬಾರಿಯ ಮಹರ್ಷಿ ವಾಲ್ಮೀಕಿ ಫಲಪುಷ್ಪ ಪ್ರದರ್ಶಕ್ಕೆ ಸುಮಾರು 9.50 ಲಕ್ಷ ದಿಂದ 10 ಲಕ್ಷಕ್ಕೂ ಹೆಚ್ಚಿನ ವೀಕ್ಷಕರು ಆಗಮಿಸುವ ನಿರೀಕ್ಷೆ ಇದೇ ಎಂದು
ತೋಟಗಾರಿಕಾ ಇಲಾಖೆ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.