News

ಇಂದು ನೆಡೆದ ದ್ವಿತೀಯ ಪಿಯು ಪರೀಕ್ಷೆಗೆ 12,533 ವಿದ್ಯಾರ್ಥಿಗಳು ಗೈರು

Share It

ಬೆಂಗಳೂರು: ಸೋಮವಾರ ರಾಜ್ಯದಲ್ಲಿ ನೆಡೆದ ದ್ವಿತೀಯ ಪಿಯುಸಿ ಗಣಿತ, ತರ್ಕ ಮತ್ತು ವ್ಯವಹಾರ ಆಧ್ಯಯನ ಪರೀಕ್ಷೆಯಲ್ಲಿ 12,533 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಒಟ್ಟಾರೆ ದ್ವಿತೀಯ ಪಿಯು ಪರೀಕ್ಷೆಗೆ ಒಟ್ಟಾರೆ 5,39,479 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರ ಪೈಕಿ ಇಲ್ಲಿಯವರೆಗೆ 5,26,946 ವಿದ್ಯಾರ್ಥಿಗಳು (ಶೇ.97.68) ಪರೀಕ್ಷೆಗೆ ಹಾಜರಾಗಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಗರಿಷ್ಠ 1,510 ವಿದ್ಯಾರ್ಥಿಗಳು ಗೈರಾಗಿದ್ದು, ರಾಯಚೂರು 1,058, ವಿಜಯಪುರ 1,010 ಮತ್ತು ಬೀದರ್ 794 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಬೆಂಗಳೂರು ಗ್ರಾಮೀಣ ಭಾಗದಲ್ಲಿ ಕನಿಷ್ಠ 79 ವಿದ್ಯಾರ್ಥಿಗಳು ಗೈರಾಗಿದ್ದಾರೆ.


Share It

You cannot copy content of this page