ಬೆಂಗಳೂರು: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಬುಧವಾರ ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶಗಳನ್ನು ಪ್ರಕಟಿಸಿದ್ದು, ಕರ್ನಾಟಕದ ಶೇ 99.70 ರಷ್ಟು ಐಸಿಎಸ್‌ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಐಎಸ್‌ಸಿ ಯಲ್ಲಿ ಶೇ 99.63 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದ 425 ಶಾಲೆಗಳಿಂದ ಒಟ್ಟು 29,745 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರೆ, 55 ಕಾಲೇಜಿನ 2,442 ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದರು. 12ನೇ ತರಗತಿಯ ಐಎಸ್‌ಸಿ ಪರೀಕ್ಷೆಗಳು ಫೆಬ್ರವರಿ 13 ರಿಂದ ಏಪ್ರಿಲ್ 5 ರವರೆಗೆ ಮತ್ತು 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಗಳು ಫೆಬ್ರವರಿ 18 ರಿಂದ ಮಾರ್ಚ್ 27 ರವರೆಗೆ ನಡೆದಿದ್ದವು.
ದೇಶಾದ್ಯಂತ ಒಟ್ಟು 2,52,557 ಅಭ್ಯರ್ಥಿಗಳು ಐಸಿಎಸ್‌ಇ ಪರೀಕ್ಷೆ ಬರೆದಿದ್ದು, ಅದರಲ್ಲಿ 2,50,249 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ. ಅದೇ ರೀತಿ 99,551 ವಿದ್ಯಾರ್ಥಿಗಳು ಐಎಸ್‌ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ 38,578 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.