ಬೆಂಗಳೂರು: ವಿಶ್ವ ಪ್ರಸಿದ್ಧ ಐರನ್ ಕಿಡ್ಸ್ ರೇಸ್‌ಗೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ.ಇದೇ ಮೊದಲ ಬಾರಿಗೆ ಐರನ್ ಕಿಡ್ಸ್ ರೇಸ್ ನಗರದಲ್ಲಿ ನಡೆಯಲಿದೆ.
ಜೂನ್ 1 ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್‌ನಲ್ಲಿ “ಪಾಲಿಸಿಬಜಾರ್ ಐರನ್ ಕಿಡ್ಸ್ ರೇಸ್” ಆಯೋಜನೆಗೊಳ್ಳುತ್ತಿದೆ. ವಿಶ್ವಪ್ರಸಿದ್ಧ ಐರನ್ ಮ್ಯಾನ್ ಟ್ರಯಥ್ಲಾನ್ ಬ್ರ್ಯಾಂಡ್‌ನಿಂದ ಪ್ರೇರಣೆ ಪಡೆದು ಭಾರತಕ್ಕೆ ತರಲಾಗಿರುವ ಈ ಸ್ಪರ್ಧೆಯನ್ನ 6 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ.
ಕಳೆದ ವರ್ಷ ಮಲೇಷ್ಯಾದಲ್ಲಿ ನಡೆದ ಐರನ್‌ಕಿಡ್ಸ್ ಈವೆಂಟ್‌ನಲ್ಲಿ ಭಾಗಿಯಾಗಿದ್ದ 7 ವರ್ಷದ ಕಾವ್ಯಾ ಚೌಬೆಗೆ ಮಾತನಾಡಿ, ಐರನ್‌ಕಿಡ್ಸ್ ಇದು ಕೇವಲ ಓಟವಲ್ಲ, ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ ಸ್ಪರ್ಧೆಯಾಗಿದೆ. ಈ ಬಾರಿ ಕೆಲವು ಸ್ನೇಹಿತರು, ಸೋದರಸಂಬಂಧಿಗಳು ಸಹ ಭಾಗವಹಿಸುತ್ತಿರುವುದರಿಂದ ಇನ್ನಷ್ಟು ಮೋಜಿನದಾಕವಾಗಿರಲಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.