ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಗರ ಜಿಲ್ಲಾ ಶಾಖೆ ವತಿಯಿಂದ 2025 ಜೂನ್ 14 ರಂದು ನಡೆಯುವ ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ರಾಜ್ಯ/ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗಲಿದೆ.
ರಕ್ತದಾನಿಗಳು ಸ್ವವಿವರವನ್ನು ಪ್ರಮಾಣ ಪತ್ರಗಳ ದಾಖಲೆಯ ಪ್ರತಿಯೊಂದಿಗೆ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ನಗರ ಜಿಲ್ಲಾ ಶಾಖೆ, 1ನೇ ಮಹಡಿ ಕಂದಾಯ ಭವನ, ಕೆ.ಜಿ ರಸ್ತೆ, ಬೆಂಗಳೂರು-560009 ಇಲ್ಲಿ ಸಲ್ಲಿಸಬಹುದಾಗಿದೆ. ಅಥವಾ ಇ-ಮೇಲ್ ircurban@gmail.com, cdmvm14@gmail.com ಗೆ ಜೂನ್ 8 ರೊಳಗೆ ಕಳುಹಿಸಿಕೊಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 7829700014, 9845198341 ಗೆ ಸಂಪರ್ಕಿಸಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ನಗರ ಜಿಲ್ಲಾ ಶಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ.