ವೈಜಾಗ್: ಆರಂಭಿಕ ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡದ ವಿರುದ್ಧ 7 ಅಂಕಗಳಿಂದ ಪರಾಭವಗೊಂಡಿತು.

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 34-41 ಅಂಕಗಳಿಂದ ದಬಾಂಗ್ ದಿಲ್ಲಿಗೆ ಶರಣಾಯಿತು. ಹೀಗಾಗಿ ಬುಲ್ಸ್ ತಂಡ ಟೂರ್ನಿಯಲ್ಲಿ ಸತತ ಎರಡನೇ ಸೋಲಿಗೆ ಒಳಗಾಯಿತು. ಬೆಂಗಳೂರು ಬುಲ್ಸ್ ಪರ ರೇಡರ್ ಆಶಿಶ್ ಮಲಿಕ್(8 ಅಂಕ) ಮತ್ತು ಆಲ್‌ರೌಂಡರ್ ಅಲಿರೇಜಾ ಮಿರ್ಜಾಯನ್(10 ಅಂಕ) ಹೊರತುಪಡಿಸಿ ಉಳಿದವರಿಂದ ದಿಟ್ಟ ಪ್ರದರ್ಶನ ಮೂಡಿಬರಲಿಲ್ಲ. ಅತ್ತ ದಬಾಂಗ್ ದಿಲ್ಲಿ ತಂಡದ ಪರ ಆಶು ಮಲಿಕ್ (15 ಅಂಕ) ಮಿಂಚಿದರೆ, ನೀರಜ್ ನರ್ವಾಲ್ ( 7 ಅಂಕ) ಸಾಥ್ ನೀಡಿದರು.

ಪಂದ್ಯದ 30 ನಿಮಿಷಗಳ ವೇಳೆಗೆ 17-34ರಲ್ಲಿಮರು ಹೋರಾಟ ಸಂಘಟಿಸಿದ ಬೆಂಗಳೂರು, ಎದುರಾಳಿ ತಂಡಕ್ಕೆ ಆತಂಕ ಮೂಡಿಸಿತು. ಆದರೆ ಇದೇ ಲಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅಂತಿಮ ನಿಮಿಷಕ್ಕೆ 29-39ರಲ್ಲಿಹಿನ್ನಡೆ ತಗ್ಗಿಸಿತಾದರೂ 2ನೇ ಸೋಲಿನಿಂದ ಪಾರಾಗಲು ಮಾತ್ರ ಸಾಧ್ಯವಾಗಲಿಲ್ಲ.