News

ಬೆಂಗಳೂರಿನಲ್ಲಿ ಲಕ್ಷ ಮನೆಗಳ ಸಮೀಕ್ಷೆ ಕಾರ್ಯ ಸಮಾಪ್ತಿ

Share It

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆಯನ್ನು ನಿನ್ನೆಯಿಂದ ಪ್ರಾರಂಭಿಸಲಾಗಿದ್ದು, ಈವರೆಗೆ 1.19 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.

ಭಾನುವಾರ ಸಂಜೆಯ ವೇಳೆಗೆ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 95,024 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾದಾರರು ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸಿ ಭಾಗವಹಿಸಬೇಕು ಎಂದು ಎಲ್ಲಾ ನಾಗರಿಕರಲ್ಲಿ ಪ್ರಾಧಿಕಾರ ವಿನಂತಿಸಿದೆ.

ನಾಗರಿಕರು ಸಹ ಸ್ವತಃ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವೆಬ್ ಸೈಟ್ ಲಿಂಕ್https://kscbcselfdeclaration.karnataka.gov.in/ ಗೆ ಭೇಟಿ ಮಾಹಿತಿ ದಾಖಲಿಸಬಹುದಾಗಿದೆ ಎಂದು ಹೇಳಿದೆ.

ಸಮೀಕ್ಷೆ ನಡೆಸಿದ ಮನೆಗಳ ವಿವರ:

1. ಕೇಂದ್ರ ನಗರ ಪಾಲಿಕೆ : 14,288

2. ಪೂರ್ವ ನಗರ ಪಾಲಿಕೆ : 17,269

3. ಉತ್ತರ ನಗರ ಪಾಲಿಕೆ : 31,363

4. ದಕ್ಷಿಣ ನಗರ ಪಾಲಿಕೆ : 16,445

5. ಪಶ್ಚಿಮ ನಗರ ಪಾಲಿಕೆ : 40,112

ಒಟ್ಟು ಮನೆಗಳು:  1,19,477


Share It

You cannot copy content of this page