News

ಸಿಲಿಕಾನ್ ಸಿಟಿಯ ಐದು ಮಕ್ಕಳ ಕಣ್ಣಿಗೆ ಪಟಾಕಿ ಸಿಡಿತದಿಂದ ಗಾಯ

Share It

ಬೆಂಗಳೂರು: ನಗರದಲ್ಲಿ ದೀಪಾವಳಿ ಆಚರಣೆ ಜೋರಾಗಿದ್ದು, ಈ ನಡುವೆ ಎಷ್ಟೇ ಜಾಗ್ರತೆ ವಹಿಸಿದರೂ ಕೂಡಾ ವಿವಿಧೆಡೆಗಳಲ್ಲಿ ಐದು ಮಕ್ಕಳ ಕಣ್ಣಿಗೆ ಪಟಾಕಿ ಸಿಡಿತದಿಂದ ಗಾಯವಾಗಿದೆ.

ವಿವಿಧ ಆಸ್ಪತ್ರೆೆಗಳಿಗೆ ಮಕ್ಕಳನ್ನು ಕರೆದೊಯ್ದು ಪೋಷಕರು ಗಾಯಗೊಂಡ ಕಣ್ಣಿಗೆ ಚಿಕಿತ್ಸೆೆ ಕೊಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ವರ್ಷವೂ ಪಟಾಕಿ ಹಚ್ಚುವ ವೇಳೆ ಮಕ್ಕಳು ಗಾಯಗೊಳ್ಳುವ ಘಟನೆಗಳು ಮುಂದುವರಿದಿವೆ. ಮಿಂಟೋ ಆಸ್ಪತ್ರೆೆ, ನಾರಾಯಣ ನೇತ್ರಾಲಯದಲ್ಲಿ ಮಕ್ಕಳು ಚಿಕಿತ್ಸೆೆ ಪಡೆದಿದ್ದಾರೆ.

ಮಿಂಟೋ ಕಣ್ಣಿನ ಆಸ್ಪತ್ರೆೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆೆ:

ಮಿಂಟೋ ಕಣ್ಣಿನ ಆಸ್ಪತ್ರೆೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. 12 ಮತ್ತು 14 ವರ್ಷದ ಇಬ್ಬರು ಮಕ್ಕಳ ಗಾಯಗೊಂಡು, ಆಸ್ಪತ್ರೆೆಗೆ ದಾಖಲಾಗಿದ್ದಾರೆ. ಒಬ್ಬರು ತಾವೇ ಹಚ್ಚಿದ ಪಟಾಕಿಯಿಂದ ಗಾಯಗೊಂಡಿದ್ದರೆ, ಇನ್ನೊಬ್ಬರು ಬೇರೊಬ್ಬರು ಹಚ್ಚಿದ ಪಟಾಕಿಯಿಂದ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆೆಯ ಪ್ರಭಾರ ನಿರ್ದೇಶಕ ಡಾ.ಶಶಿಧರ್ ಹೇಳಿದ್ದಾರೆ.

ಒಬ್ಬರು ಕಲಾಸಿಪಾಳ್ಯದವರು, ಇನ್ನೊಬ್ಬರು ಕೆಂಪೇಗೌಡ ನಗರದವರು. ಪಟಾಕಿ ಪಿಸ್ತೂಲ್ ಕಿಡಿ ಕಣ್ಣಿಗೆ ತಾಕಿ ಒಬ್ಬರಿಗೆ ಗಾಯವಾಗಿದೆ. ಬೇರೊಬ್ಬರು ರಾಕೆಟ್ ಹೊಡೆದಿದ್ದರಿಂದ ಇನ್ನೊಬ್ಬ ಬಾಲಕಿಯ ಕಣ್ಣಿನ ರೆಪ್ಪೆೆಗೆ ಗಾಯವಾಗಿದೆ. ಅದೃಷ್ಟವಶಾತ್ ಇಬ್ಬರು ಮಕ್ಕಳಿಗೂ ದೃಷ್ಟಿಗೆ ತೊಂದರೆ ಆಗಿಲ್ಲ. ಇಬ್ಬರು ಕೂಡ ಚಿಕಿತ್ಸೆೆ ಪಡೆದು ಆಸ್ಪತ್ರೆೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ನಾರಾಯಣ ನೇತ್ರಾಾಲಯದಲ್ಲಿ ಮೂವರು ಮಕ್ಕಳಿಗೆ ಚಿಕಿತ್ಸೆೆ:

ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ ಕಣ್ಣಿಗೆ ಗಾಯವಾಗಿ ಮೂವರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲ ದಿನವೇ ಪಟಾಕಿಯಿಂದ ಮೂವರು ಮಕ್ಕಳಿಗೆ ಗಾಯವಾಗಿದೆ. 3 ವರ್ಷದ ಒಂದು ಮಗು, 14 ವರ್ಷದೊಳಗಿನ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸೋದನ್ನು ನೋಡುವಾಗ 3 ವರ್ಷದ ಮಗುವಿನ ಕಣ್ಣಿಗೆ ಹಾನಿಯಾಗಿದೆ. ಉಳಿದಿಬ್ಬರು ಪಟಾಕಿ ಸಿಡಿಸುವ ವೇಳೆ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಅಲ್ಲಿನ ವೈದ್ಯರು ನೀಡಿದ್ದಾರೆ.


Share It

You cannot copy content of this page