ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ 2025-26 ನೇ ಸಾಲಿಗೆ ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ನಲ್ಲಿ ಎಂ.ಬಿ.ಎ. ( ಬೆಳಿಗ್ಗೆ ಮತ್ತು ಸಂಜೆ) ಹಾಗೂ ವಿಶ್ವವಿದ್ಯಾನಿಲಯದ ಬಾಗಲೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಸಿ.ಎ ಕೋರ್ಸ್‍ಗಳಲ್ಲಿ ಉಳಿದ ಸೀಟುಗಳಿಗಾಗಿ ಆಸಕ್ತ ಅರ್ಹ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆನ್‍ಲೈನ್ ಅರ್ಜಿಗಳು ಲಭ್ಯವಿದ್ದು, ಅರ್ಜಿ ಸಲ್ಲಿಸಲು ನವಂಬರ್ 7 ಅಂತಿಮ ದಿನಾಂಕವಾಗಿದೆ. ರೂ. 200 ದಂಡ ಶುಲ್ಕ ಸಹಿತ ನವಂಬರ್ 10 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನವಂಬರ್ 13 ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ನವಂಬರ್ 15 ರಂದು ಜೇಷ್ಠತಾ ಪಟ್ಟಿ ಪ್ರಕಟಿಸಿ, ನವಂಬರ್ 17ರಂದು ಕೌನ್ಸಲಿಂಗ್ ನಡೆಸಲಾಗುವುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಎ. ನವೀನ್ ಜೋಸೆಫ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
