News

ಸಂಚಾರಿ ನಿಯಮ ಉಲ್ಲಂಘನೆ ಬಳಿಕ ನ್ಯಾಯಾಧೀಶನೆಂದ ವಕೀಲನಿಗೆ ಪರಿಷತ್ ನೋಟಿಸ್

Share It

ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಬಿದ್ದ ವೇಳೆ ತಾನು ನ್ಯಾಯಾಧೀಶ (ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಹೇಳಿಕೊಂಡಿದ್ದ ವಕೀಲನಿಗೆ ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದೆ.

ವಕೀಲ ಪ್ರಕಾಶ್ ಸಿಂಗ್ ಅವರಿಗೆ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದ್ದು, ಪರಿಷತ್ತಿನ ಶಿಸ್ತು ಸಮಿತಿ ಎಂದು ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ತಾಕೀತು ಮಾಡಿದೆ. ಇದೇ ವೇಳೆ ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಎಕ್ಸ್ ಪಾರ್ಟಿ ಆಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ವಕೀಲ ಪ್ರಕಾಶ್ ಸಿಂಗ್ ಅವರನ್ನು ಸಂಚಾರ ನಿಮಯ ಉಲ್ಲಂಘನೆಗೆ ತಡೆದ ವೇಳೆ, ಪೊಲೀಸರಿಗೆ ನೀವೇಕೆ ನನ್ನನ್ನು ತಡೆದಿರಿ. ನಾನು ನಿಮಗೆ ಲೈಸೆನ್ಸ್ ತೋರಿಸುವುದಿಲ್ಲ. ಸಬ್ ಇನ್ಸಪೆಕ್ಟರ್ ಮಾತ್ರ ನನ್ನ ಲೈಸೆನ್ಸ್ ಕೇಳಬಹುದು ಎಂದಿದ್ದಾರೆ. ಅಲ್ಲದೇ, ನಾನು ಜೆಎಮ್ಐಸಿ (ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್) ಪ್ರಕಾಶ್ ಸಿಂಗ್ ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ವಕೀಲರ ಪರಿಷತ್ತು ನೋಟಿಸ್ ಜಾರಿ ಮಾಡಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಡ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170, 186 ಹಾಗು 419 ಅಡಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಸಿಂಗ್ ವಶಕ್ಕೆ ಪಡೆದು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಿಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸಪ್ರೆಸ್ ಹಾಗೂ ಇಂಡಿಯಾ ಟುಡೇ ವರದಿ ಮಾಡಿವೆ.


Share It

You cannot copy content of this page