News

ನಿರುದ್ಯೋಗಿ ಯುವಕರಲ್ಲಿ ಶೇ.67 ರಷ್ಟು ಪದವೀಧರರಿದ್ದಾರೆ: ವರದಿಯಲ್ಲಿ ಶಾಕಿಂಗ್ ವಿವರಗಳು ಬಹಿರಂಗ

Share It

ನವದೆಹಲಿ: ಕಳೆದ ಎರಡು ದಶಕಗಳಲ್ಲಿ ಭಾರತ ಯುವಜನರಿಗೆ ಉನ್ನತ ಶಿಕ್ಷಣದ ಪ್ರವೇಶವನ್ನು ಗಣನೀಯ ಹೆಚ್ಚಿಸಿದ್ದು ಮೆಚ್ಚುವಂಥದ್ದಾಗಿದರೂ, ನಿರುದ್ಯೋಗದ ವಿಚಾರದಲ್ಲಿ 20 ರಿಂದ 29 ವರ್ಷ ವಯಸ್ಸಿನ ಪದವೀಧರರ ಪಾಲು ದ್ವಿಗುಣಗೊಂಡಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮಂಗಳವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ತಿಳಿಸಿದೆ.

2023 ರಲ್ಲಿ ನಿರುದ್ಯೋಗಿ ಯುವಕರಲ್ಲಿ ಸುಮಾರು 67% (ಸುಮಾರು 1.1 ಕೋಟಿ) ಪದವೀಧರರು ಎಂದು ದತ್ತಾಂಶದ ಮೂಲಕ ತಿಳಿಸಲಾಗಿದೆ, ಇದು 2004 ರಲ್ಲಿ 32% (30 ಲಕ್ಷ) ದಷ್ಟು ಇದದ್ದು ಗಮನಾರ್ಹವಾಗಿದೆ. ಅದೇ ಸಮಯದಲ್ಲಿ ಪದವೀಧರರ ಪಾಲು 2004 ರಲ್ಲಿ 10% (1.9 ಕೋಟಿ) ಇದದ್ದು, 2023 ರಲ್ಲಿ 28% (6.3 ಕೋಟಿ) ಗೆ ಏರಿದೆ. 2004 ಮತ್ತು 2023 ರ ನಡುವೆ, ಪ್ರತಿ ವರ್ಷ ಸರಿಸುಮಾರು 50 ಲಕ್ಷ ಪದವೀಧರರು ಹೊರಬೀಳುತ್ತಿದ್ದಾರೆ, ಆದರೆ ಉದ್ಯೋಗದಲ್ಲಿರುವ ಪದವೀಧರರ ಸಂಖ್ಯೆ ವಾರ್ಷಿಕವಾಗಿ ಸುಮಾರು 28 ಲಕ್ಷದಷ್ಟು ಮಾತ್ರ ಏರಿಕೆಯಾಗಿದೆ, ಅದರಲ್ಲಿ ಕೇವಲ 17 ಲಕ್ಷ ಜನರು ಮಾತ್ರ ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ. ಆದ್ದರಿಂದ, ಪದವೀಧರ ಉದ್ಯೋಗದ ಪ್ರಮಾಣ ಪೂರೈಕೆಗೆ ಅನುಗುಣವಾಗಿಲ್ಲ. ಹೆಚ್ಚುತ್ತಿರುವ ಪದವೀಧರರ ಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲವಾದ ಕಾರಣ ಗಳಿಕೆಯಲ್ಲಿನ ಕುಸಿತಕ್ಕೂ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026 ಎಂಬ ಶೀರ್ಷಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುವ ಪದವೀಧರರ ಉದ್ಯೋಗಾರ್ಹತೆಯ ಬಗ್ಗೆ ಕಳವಳಗಳು ವ್ಯಕ್ತವಾಗಿದ್ದು, ಅವರ ಅನುಭವದ ಕೊರತೆ ಅಥವಾ ಕೌಶಲ್ಯದಲ್ಲಿನ ಹೊಂದಾಣಿಕೆ ಸೇರಿದಂತೆ ಹಲವಾರು ಕಾರಣಗಳನ್ನು ಮುಂದಿಡಲಾಗಿದೆ. ಆದರೆ ಮೊದಲಿಗಿಂತ ಉತ್ತಮ ಆದಾಯದ ಮಟ್ಟವಿರುವುದರಿಂದ ಉದ್ಯೋಗ ಹುಡುಕುವ ಮೊದಲು ಕಾಯುವ ಸಾಮರ್ಥ್ಯ ಕೂಡ ಹೆಚ್ಚಾಗಿದೆ. ಬಡ ಕುಟುಂಬಗಳು ಸಹ ಇದರಲ್ಲಿ ಸೇರಿವೆ. ಇದಲ್ಲದೆ, ಆರಂಭಿಕ ಹಂತದ ಉದ್ಯೋಗಗಳಲ್ಲಿ ಪದವೀಧರರಲ್ಲದವರಿಗಿಂತ ಯುವ ಪದವೀಧರರು ಹೆಚ್ಚಿನ ಮಾಸಿಕ ಗಳಿಕೆಯನ್ನು ಹೊಂದಿದ್ದಾರೆ. ಯುವಕರಲ್ಲಿ ಪದವಿ ಮತ್ತು ಪದವಿ ಪಡೆಯದವರ ಗಳಿಕೆಯ ನಡುವಿನ ಅಂತರವು ಗಣನೀಯವಾಗಿ ಹೆಚ್ಚಾಗಿರುವುದು ಸಹ ಗಮನಾರ್ಹವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2017 ದಿಂದ ಶಿಕ್ಷಣದಲ್ಲಿ ಯುವಕರ ಪಾಲು 38% ನಿಂದ 2024 ರಲ್ಲಿ 34% ಕ್ಕೆ ಇಳಿದಿದೆ. ಉನ್ನತ ಶಿಕ್ಷಣದ ಪ್ರವೇಶದ ವಿಷಯದಲ್ಲಿ ಆರ್ಥಿಕ ಅಡೆತಡೆಗಳು ಪ್ರವೇಶವನ್ನು ನಿರ್ಬಂಧಿಸುತ್ತಲೇ ಇವೆ, ವಿಶೇಷವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿಗಳನ್ನು ಪಡೆಯುವ ವೆಚ್ಚವು ಬಡ ಕುಟುಂಬಗಳ ವಾರ್ಷಿಕ ತಲಾ ವೆಚ್ಚವನ್ನು ಮೀರುತ್ತದೆ. ಈ ಅಂತರವು 2007 ಮತ್ತು 2017 ರ ನಡುವೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಯುವಕರ ಭಾಗವಹಿಸುವಿಕೆ ಬದಲಾಗಿದ್ದು, ಈ ನಿಟ್ಟಿನಲ್ಲಿ ನಾಲ್ಕು ದಶಕಗಳ ಹಿಂದಿನ ಅಧಿಕೃತ ಡೇಟಾಬೇಸ್‌ಗಳನ್ನು ಆಧರಿಸಿದೆ ವರದಿಯನ್ನು ತಯಾರಿಸಲಾಗಿದೆ.


Share It

You cannot copy content of this page