News

ಡಿಜಿಟಲ್ ಅರೆಸ್ಟ್ ತಡೆಯಲು ವಾಟ್ಸಾಪ್‌ ಗೆ ಮಹತ್ವದ ನಿರ್ದೇಶನಗಳನ್ನು ನೀಡಿದ ಗೃಹಸಚಿವಾಲಯ

Share It

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಡಿಜಿಟಲ್ ಅರೆಸ್ಟ್ ವಂಚನೆ ತಡೆಯಲು ವಾಟ್ಸಾಪ್‌ ಕಂಪನಿಗೆ ಮಹತ್ವದ ನಿರ್ದೇಶನ ನೀಡಿದ್ದು, ವಂಚಕರ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವುದು, ಅಕೌಂಟ್ ಗಳಿಗೆ ಸಿಮ್‌ಗೆ ಲಿಂಕ್ ಮಾಡುವುದು ಮತ್ತು ಫೇಕ್ ಪ್ರೊಫೈಲ್‌ಗಳನ್ನು ಪತ್ತೆಹಚ್ಚಲು ಎಐ ಬಳಸುವಂತೆ ಸೂಚನೆ ನೀಡಿದೆ.

ವಂಚನೆಗೆ ಬಳಕೆಯಾಗುವ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸಬೇಕು. ವಂಚನೆ ಎಸಗುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣ ಅದಕ್ಕೆ ಬಳಸಿದ ಮೊಬೈಲ್‌ನ ಡಿವೈಸ್‌ ಐಡಿಯನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವದಿಲ್ಲ ಎಂದು ಸೂಚನೆಯನ್ನು ನೀಡಿದೆ.

ಡಿಲೀಟ್ ಆದ ಅಕೌಂಟ್‌ಗಳ ಮಾಹಿತಿಯನ್ನು ಕನಿಷ್ಠ 180 ದಿನಗಳ ಕಾಲ ಉಳಿಸಿಕೊಳ್ಳಬೇಕು. ಇದು ತನಿಖಾ ಸಂಸ್ಥೆಗಳಿಗೆ ಪುರಾವೆ ಸಂಗ್ರಹಿಸಲು ನೆರವಾಗಲಿದೆ. ವಾಟ್ಸಾಪ್ ಅಕೌಂಟ್‌ಗಳನ್ನು ಸಕ್ರಿಯ ಮೊಬೈಲ್ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಅನಾಮಧೇಯವಾಗಿ ವಾಟ್ಸಾಪ್ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಬೇಕಿದೆ ಎಂದಿದೆ.

ಪೊಲೀಸ್‌ ಅಥವಾ ಸಿಬಿಐ ಲೋಗೋಗಳನ್ನು ಪ್ರೊಫೈಲ್ ಪಿಕ್ಚರ್ ಬಳಸಿ ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಬಳಸಬಹುದು. ಅಂತಹ ಫೇಕ್ ಪ್ರೊಫೈಲ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು. ಮ್ಯಾಲಿಶಿಯಸ್ ಎಪಿಕೆ ಫೈಲ್‌ಗಳ ವರ್ಗಾವಣೆಯನ್ನು ಪತ್ತೆಹಚ್ಚಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಗೃಹ ಸಚಿವಾಲಯ ಕಟ್ಟುನಿಟ್ಟಾಗಿ ಸೂಚಿಸಿದೆ.


Share It

You cannot copy content of this page