News

ಬಿಬಿಎಂಪಿಯಿಂದ ಪಶುಪಾಲನಾ ಸಹಾಯವಾಣಿ ಇನ್ನಷ್ಟು ತ್ವರಿತಗತಿಯಲ್ಲಿ ನಿರ್ವಹಣೆ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮುದಾಯದ ಪ್ರಾಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಸಮನ್ವಯವನ್ನು ಸುಧಾರಿಸುವ ನಿಟ್ಟಿನಲ್ಲಿ ಬಿಬಿಎಂಪಿಯ ಪಶುಪಾಲನಾ ವಿಭಾಗ 1533 ಸಹಾಯವಾಣಿಯನ್ನು ಇನ್ನಷ್ಟು ತ್ವರಿತಗತಿಯಲ್ಲಿ ನಿರ್ವಹಿಸಲು ಮುಂದಾಗಿದೆ.

ನಾಗರೀಕರು ತಮ್ಮ ಪ್ರಶ್ನೆಗಳನ್ನು ಪರಿಹರಿಸಲು ವಾಟ್ಸಾಪ್ ಮತ್ತು ಫೇಸ್ಬುಕ್ ಗ್ರೂಪ್ ಗಳು, ವೈಯಕ್ತಿಕ ಸಹಾಯಕ ನಿರ್ದೇಶಕರ ಸಂಖ್ಯೆಗಳಿಗೆ ಕರೆ, ಇಮೇಲ್‌ಗಳು ಮತ್ತು ಇನ್ನಿತರ ವೇದಿಕೆಗಳನ್ನು ತಲುಪುತ್ತಿದ್ದಾರೆ. ಆದರೆ ಈ ರೀತಿಯ ಗೂಂದಲಗಳಿಂದಾಗಿ ನಾಗರೀಕರಿಗೆ ಹತಾಶೆಗೆಯಾಗುತ್ತಿದೆ. ಇನ್ನು ಆಫ್‌ಲೈನ್ ವಿಧಾನಗಳ ಮೂಲಕ ಪ್ರಕರಣಗಳನ್ನು ನಿರ್ವಹಿಸುವುದು ದಾಖಲಾತಿಯಲ್ಲಿ ಅಂತರವನ್ನು ಉಂಟುಮಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸಹಾಯವಾಣಿ ಉತ್ತರ ಒದಗಿಸಲಿದೆ.

ಈಗ ಸಹಾಯವಾಣಿ ಅಧಿಕ ವಿವರವಾದ ವರ್ಗಗಳನ್ನು ಹೊಂದಲಿದೆ. ಪ್ರಾಣಿಗಳ ಜನನ ನಿಯಂತ್ರಣ, ಆಂಟಿ-ರೇಬಿಸ್ ವ್ಯಾಕ್ಸಿನೇಷನ್ ವಿನಂತಿಗಳು, ನಾಯಿ ಕಡಿತ ನಿರ್ವಹಣೆಯಂತಹ ಸಾಮಾನ್ಯ ದೂರುಗಳ ಹೊರತುಪಡಿಸಿ ಇನ್ನಿತರ ಸಮಸ್ಯೆಗಳಾದ ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ, ಪ್ರಾಣಿಗಳ ಮೇಲಿನ ಕ್ರೌರ್ಯ, ಪ್ರಾಣಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಅದಕ್ಕೆ ಪರವಾನಗಿ ನೀಡುವಲ್ಲಿ ಸಹಾಯ ಮಾಡುವ ಬಗ್ಗೆಯೂ ಸಹಾಯವಾಣಿಯಲ್ಲಿ ಉತ್ತರ ಸಿಗಲಿದೆ.

ನಾಗರೀಕರು 1533 ಗೆ ಕರೆ ಮಾಡುವುದು/ಸಹಾಯ ಅಪ್ಲಿಕೇಶನ್‌ನಲ್ಲಿ ರಿಕ್ವೆಸ್ಟ್ ಗಳನ್ನು ಲಾಗ್ ಮಾಡುವ ಮೂಲಕ ಮತ್ತು ಬೆಂಗಳೂರು ಒನ್ ಸಿಟಿ ಒನ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಸಹ ಸಂಪರ್ಕಿಸಬಹುದಾಗಿದೆ. ರಿಕ್ವೆಸ್ಟ್ ಲಾಗಿನ್ ಆದ ನಂತರ, ಪ್ರತಿ ವಾರ್ಡ್‌ಗೆ ಅಧಿಕೃತ ಕ್ರೌರ್ಯ ವಿರೋಧಿ ನಿರೀಕ್ಷಕರೂ ಆಗಿರುವ ಪಶುವೈದ್ಯಕೀಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ.


Share It

You cannot copy content of this page