ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸಲು ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಪರಿಚಯಿಸಲು ಮುಂದಾಗಿದೆ.
ಬೆಂ.ಮ.ಸಾ. ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆ ಹೊಂದಿರುವ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ ನಾಳೆಯಿಂದ ಪರಿಚಯಿಸುತ್ತಿದೆ.
ಎಂಎಫ್-8ಎ ಕ್ರಮ ಸಂಖ್ಯೆಯ ವಾಹನ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ದಿಂದ ಶಿವಾಜಿನಗರದ ವರೆಗೆ ಸಂಚರಿಸಲಿದೆ. ಮಾರ್ಗ ಮಧ್ಯ ಮಲ್ಲೇಶ್ವರಂ ಸರ್ಕಲ್, ಗುಟ್ಟಹಳ್ಳಿ, ಮೌಂಟ್ ಕಾರ್ಮೆಲ್ ಕಾಲೇಜು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ನಿಲುಗಡೆಯಾಗಲಿದೆ.
ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 7.15 ಮತ್ತು 8.45, ಮಧ್ಯಾಹ್ನ 12.15, 1.30, 2.40 ಕ್ಕೆ ಮತ್ತು ಸಂಜೆಯ ವೇಳೆ 4.25 ಕ್ಕೆ ಹೊರಡಲಿದೆ. ಶಿವಾಜಿನಗರದಿಂದ ಬೆಳಗ್ಗೆ 8.5, 8.45,11.15 ಮಧ್ಯಾಹ್ನ 12.55, 2.5 ಮತ್ತು 3.45 ಕ್ಕೆ ಹೊರಟು ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ತಲುಪಲಿದೆ.