News

ಏರ್ ಶೋ ಹಿನ್ನಲೆ ಮಾಂಸ ಮಾರಾಟ ನಿಷೇಧ

Share It

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಏರ್ ಶೋ-2025 ರ ಪ್ರಯುಕ್ತ 23ನೇ ಜನವರಿಯಿಂದ 17ನೇ ಫೆಬ್ರವರಿ 2025 ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆಯ ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ತಿಳಿಸಿದ್ದಾರೆ.

ಯಲಹಂಕ ಏರ್ ಪೋರ್ಸ್ ಸ್ಟೇಷನಲ್ಲಿ ಜನವರಿ 10 ರಿಂದ 14 ರವರೆಗೆ ಅಂತರಾಷ್ಟ್ರೀಯ ಏರ್‌ ಶೋ ನಡೆಯಲಿದೆ. ಈ ಸಂಬಂಧ ಯಲಹಂಕ ವಲಯದ ಏರ್‌ಪೋರ್ಸ್‌ ಸ್ಟೇಷನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳು ಮುಚ್ಚುಬೇಕು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದ ಎಂದು ಮಾಹಿತಿ ನೀಡಿದ್ದಾರೆ.

ಏರ್ ಶೋ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಎಲ್ಲಾ ಮಾಂಸಾಹಾರ ಮಾರಾಟ ಉದ್ದಿಮೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ರ ರೂಲ್ 91 ಮತ್ತು ಇತರ ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದ್ದಾರೆ.


Share It

You cannot copy content of this page