ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ 2ನೇ ಸಿಗ್ನಲಿಂಗ್ ಪರೀಕ್ಷೆ ಪೂರ್ಣಗೊಂಡಿದ್ದು, ಮಾರ್ಚ್ ಮೊದಲ ವಾರದಿಂದ ಇತರ ರೈಲು ಪರೀಕ್ಷೆೆ ನಡೆಯಲಿದೆ.
ಹಳದಿ ಮಾರ್ಗಕ್ಕೆೆ ಇದು ಎರಡನೇ ರೈಲು ಸೆಟ್ ನಡೆಯುತಿದ್ದು, ಬಹು ಇತರ ರೈಲು ಪರೀಕ್ಷೆಗಳಲ್ಲಿ ಕೊನೆಯ ಸಿಗ್ನಲಿಂಗ್ ಪರೀಕ್ಷೆ ನಡೆಸಬೇಕಾಗಿದೆ. ಟಿಎಸ್2ಕ್ಕೆೆ ಸಿಗ್ನಲಿಂಗ್ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಮಾರ್ಚ್ ಮೊದಲ ವಾರದಿಂದ ಇತರೆ ರೈಲು ಪರೀಕ್ಷೆಗಳು ಪ್ರಾರಂಭವಾಗಲಿದೆ.
ಇನ್ನೂ ಮೂರನೇ ರೈಲು ಸೆಟ್ ಮಾರ್ಚ್ 2025 ರ ಅಂತ್ಯದಲ್ಲಿ ಬರುವ ನಿರೀಕ್ಷೆ ಇದೆ. ಆ ಬಳಿಕ ನಮ್ಮ ಮೆಟ್ರೋೋ ಹಳದಿ ಮಾರ್ಗದಲ್ಲಿ ವಾಣಿಜ್ಯ ರೈಲು ಸಂಚಾರ ಆರಂಭದ ಬಗ್ಗೆೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.