ಬೆಂಗಳೂರು: ನಾಳೆ (ಶನಿವಾರ) ರಂದು ಬೆಳಗ್ಗೆ 9 ಗಂಟೆಯಿಂದ ಭಾನುವಾರ ಸಂಜೆ 5 ಗಂಟೆಯವರೆಗೆ 66/11ಕೆ.ವಿ ಬಾಗ್ಮನೆ ಡಬ್ಲೂಟಿಸಿ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕಾರ್ಯ ನೆಡೆಸಲಾಗುತ್ತಿರುವುದರಿಂದ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬಾಗ್ಮನೆ ಟೆಕ್ ಪಾರ್ಕ್ ಸುತ್ತುಮುತ್ತಲಿನ ಪ್ರದೇಶಗಳಾದ ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಬಾಗ್ಮನೆ, ಮೂನ್ ಸ್ಟೋನ್ ಆಫೀಸ್ ಬಿಲ್ಡಿಂಗ್ ಲ್ಯಾಬ್, ಬಾಗ್ಮನೆ ಡಬ್ಲ್ಯೂಟಿಸಿ, ಎಮರಾಲ್ಡ್ ಬಿಲ್ಡಿಂಗ್ ಬಾಗ್ಮನೆ ಎಡಬ್ಲ್ಯುಟಿಸಿ ಬಾಗಮನೆ ಅಕ್ವಾ ಮರಿನ್ ಪೆರಿಡಾಟ್ ಬಿಲ್ಡಿಂಗ್, ವೆಂಕಟೇಶ್ವರನಗರ, ವೆಂಕಟೇಶ್ವರಪುರ ಲೇಔಟ್ ಕನ್ಯಾ ಕಟ್ಟಡ, ಔಟರ್ ರಿಂಗ್ ರೋಡ್, ದೊಡ್ಡನೆಕ್ಕುಂಡಿ ರೈಲ್ವೇ ಬ್ರಿಡ್ಜ್ ,ಕರೀನಾ ಪೂರ್ವ ಕಟ್ಟಡ ಗಾರ್ನೆಟ್ ಕಟ್ಟಡ ಬಾಗ್ಮನೆ ಕರೀನಾ ಪಶ್ಚಿಮದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ವರ್ಲ್ಡ್ ಟ್ರೇಡ್ ಸೆಂಟರ್ ಬಾಗ್ಮನೆ ಯುಟಿಲಿಟಿ ಬ್ಲಾಕ್, ಬಾಗಮನೆ ರಿಯೋ ಆಫೀಸ್ ಬ್ಲಾಕ್ ಪೂರ್ವ ವಿಲ್ಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟ್ ರಿಂಗ್ ರೋಡ್, ರಾಮಕೃಷ್ಣ ರೆಡ್ಡಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೂರೈಕೆ ಸ್ಥಗಿತವಾಗಲಿದೆ.