ಬೆಂಗಳೂರು: ಆಸ್ತಿ ದತ್ತಾಂಶ ತಿದ್ದುಪಡಿಗೆ ದಾಖಲೆ ಸಲ್ಲಿಸಲು ಫೆಬ್ರವರಿ 25 ಕೊನೆಯ ದಿನವಾಗಿದೆ.
ಮುಖ್ಯವಾಗಿ ಮಾದನಾಯಕನಹಳ್ಳಿ ನಗರಸಭಾ ಕಾರ್ಯಾಲಯದ ವ್ಯಾಪ್ತಿಯ ಸ್ವತ್ತುಗಳಿಗೆ ಸಂಬಂಧಿಸಿದ ದತ್ತಾಂಶವನ್ನು ನಗರ ಸ್ಥಳೀಯ ಸಂಸ್ಥೆಯ ವೈಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಕಛೇರಿಯಲ್ಲಿ ಮುದ್ರಣ ಪ್ರತಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಡಲಾಗಿದೆ. ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ನೀಡಲಾಗಿರುವ ದತ್ತಾಂಶವನ್ನು ವೀಕ್ಷಿಸಿ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ದಾಖಲಾತಿಗಳನ್ನು ಫೆಬ್ರವರಿ 25 ರೊಳಗೆ ಸಲ್ಲಿಸಬೇಕಿದೆ.
ಸಾರ್ವಜನಿಕರು ತಿದ್ದುಪಡಿಗಳಿದ್ದಲ್ಲಿ ಕ್ರಯ ಪತ್ರ/ ದಾನಪತ್ರ/ ವಿಭಾಗ ಪತ್ರ/ ಒಪ್ಪಿಗೆ ಪತ್ರ/ ಹಕ್ಕು ಬಿಡುಗಡೆ ಪತ್ರ, ನಿವೇಶನ/ ಕಟ್ಟಡದ ಜಿ.ಪಿ.ಎಸ್ ಛಾಯಾ ಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಐಡಿ ಕಾರ್ಡ್ (ಪಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ ಮತ್ತು ರೇಷನ್ ಕಾರ್ಡ್), ಋಣ ಭಾರ ಪ್ರಮಾಣ ಪತ್ರ (ಇಸಿ), ಕಂದಾಯ ರಸೀದಿ ಮತ್ತು ಕುಡಿಯುವ ನೀರಿನ ದರ ಪಾವತಿ ರಶೀದಿ, ಆರ್.ಟಿ.ಸಿ ಮತ್ತು ಕಟ್ಟಡದ ವಿದ್ಯುತ್ ಬಿಲ್ ದಾಖಲಾತಿಗಳೊಂದಿಗೆ ಮಾದನಾಯಕನಹಳ್ಳಿ ನಗರಸಭಾ ಕಾರ್ಯಾಲಯ ಕಛೇರಿಗೆ ಸಲ್ಲಿಸಬೇಕಿದೆ.
ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳ ತೆರಿಗೆ ಬೇಡಿಕೆ, ವಸೂಲಿ ಮತ್ತು ಬಾಕಿ ವಿವರಗಳನ್ನು ನಿರ್ವಹಿಸಲು ನಿಗಧಿಪಡಿಸಿರುವ ನಮೂನೆ ಕೆ.ಎಂ.ಎಫ್-24ರಲ್ಲಿ ನಿಗಧಿತ ಕಾಲಮೊತಿಯೊಳಗೆ ಸಲ್ಲಿಸಬೇಕಿದೆ. ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಲು ಸಹ ಸೂಚಿಸಲಾಗಿದೆ. ಈ ಕಾರ್ಯವು ಪೂರ್ಣಗೊಂಡ ನಂತರ ಪರಿಶೀಲನೆ ಕಾರ್ಯವನ್ನು ಸಹ ಕೈಗೊಳ್ಳಲಾಗಿದೆ. ನಂತರ ತಂತ್ರಾಂಶದಲ್ಲಿ ಗಣಕೀಕರಣಗೊಳಿಸಿರುವ ಮಾಹಿತಿಯನ್ನು ವ್ಯಾಲಿಡೇಟ್ ಮಾಡಿ ಇ-ಆಸ್ತಿ ತಂತ್ರಾಂಶದಲ್ಲಿ ಇಂಡೀಕರಣ ಮಾಡಲಾಗುತ್ತದೆ.
ಪ್ರತಿ ಆಸ್ತಿಗೆ ನಮೂನೆ -3/2 ಅನ್ನು ಸೃಜಿಸಿ ಆಸ್ತಿ ಮಾಲೀಕರಿಗೆ ನೀಡಬೇಕಾಗಿದೆ. ಅದರಂತೆ ಸ್ವತ್ತುಗಳಿಗೆ ಸಂಬಂಧಿಸಿದ ದತ್ತಾಂಶವನ್ನು ನಗರ ಸ್ಥಳಿಯ ಸಂಸ್ಥೆಯ ವೈಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಕಛೇರಿಯಲ್ಲಿ ಮುದ್ರಣ ಪ್ರತಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಡಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಸ್ವತ್ತುಗಳಿಗೆ ನೀಡಲಾಗಿರುವ ದತ್ತಾಂಶವನ್ನು ವೀಕ್ಷಿಸಿ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಬೇಕಿದೆ.