ಬೆಂಗಳೂರು: ನಮ್ಮ ಮೆಟ್ರೋದಲ್ಲಿ ದರ ಏರಿಕೆಯಿಂದಾಗಿ ಜನಸಂಚಾರದ ಪ್ರಮಾಣ ಕುಸಿತವಾದ ಬೆನ್ನಲ್ಲೇ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆೆ ಸುಮಾರು 1 ಲಕ್ಷದಷ್ಟು ಹೆಚ್ಚಾಗಿದೆ.
ದರ ಹೆಚ್ಚಳದ ಹಿನ್ನೆೆಲೆ ಸಾರ್ವಜನಿಕರು ಸ್ವಂತ ವಾಹನ ಹಾಗೂ ಇತರ ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುವುದನ್ನು ಹೆಚ್ಚಿಸಿದ್ದು, ಆದ್ದರಿಂದ ಬಿಎಂಟಿಸಿಯಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ.
ವರದಿಯ ಪ್ರಕಾರ ಭಾನುವಾರ ಮೆಟ್ರೋ ಮತ್ತು ಬಿಎಂಟಿಸಿಯಲ್ಲಿ ಸಂಚರಿಸುವವರ ಸಂಖ್ಯೆೆ ಕಡಿಮೆಯಿರುತ್ತದೆಯಾದರೂ ಈ ಬಾರಿ ನಗರ ಸಾರಿಗೆಯಲ್ಲಿ ಪ್ರಯಾಣಿಸುವವರ ಸಂಖ್ಯೆೆ ಹೆಚ್ಚಳವಾಗಿದೆ. ಇನ್ನು ಬಿಎಂಟಿಸಿ ಬಸ್ ಪ್ರಯಾಣಿಕರ ಸಂಖ್ಯೆೆ ನಿತ್ಯ 36 ಲಕ್ಷದಷ್ಟಿದ್ದು, ಫೆ.9ರಂದು ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಿದ ಬಳಿಕ ಬಿಎಂಟಿಸಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆೆ 38 ಲಕ್ಷದಷ್ಟಕ್ಕೆೆ ಏರಿಕೆಯಾಗಿದೆ.
ಸಾಮಾನ್ಯವಾಗಿ ಬೆಂಗಳೂರು ಮೆಟ್ರೋ ಪ್ರಯಾಣಿಕರ ದೈನಂದಿನ ಸಂಖ್ಯೆೆ ಸಾರ್ವತ್ರಿಕವಾಗಿ 9.20 ಲಕ್ಷವರೆಗೆ ತಲುಪಿತ್ತು. ನಿತ್ಯ ಸರಾಸರಿ 7.50 ಲಕ್ಷ ಜನರು ಓಡಾಡುತ್ತಿದ್ದರು. ಆದರೆ ಮೊನ್ನೆೆ ದರ ಏರಿಕೆ ಮಾಡಿದ ದಿನವೇ ಈ ಸಂಖ್ಯೆೆಯಲ್ಲಿ ತೀವ್ರ ಇಳಿಕೆ ಆಗಿದೆ. ಒಂದೇ ದಿನ ಪ್ರಯಾಣಿಕರ ಸಂಖ್ಯೆೆ 6.23 ಲಕ್ಷಕ್ಕೆೆ ಇಳಿದಿದೆ. ಸದ್ಯ ನಮ್ಮ ಮೆಟ್ರೋ ಸ್ಟೇಜ್ ಬೈ ಸ್ಟೇಜ್ ಪ್ರಯಾಣ ದರವನ್ನು ಮರ್ಜ್ ಮಾಡಿದ್ದು, ಇದರ ಹೊರತಾಗಿಕೂಡ ದರ ಇಳಿಕೆಗೆ ಮುಂದಾಗಿದೆ. ಸದ್ಯ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆೆ 5.30 ಲಕ್ಷಕ್ಕೆೆ ಮುಟ್ಟಿದೆ.