News

ಮಾರ್ಚ್ 7ಕ್ಕೆ ಕ್ರೀಡಾ ಇಲಾಖೆಯಿಂದ ಮಹಿಳಾ ಕ್ರೀಡಾಕೂಟ

Share It

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮಾರ್ಚ್ 7 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

19 ರಿಂದ 45ರ ವಯೋಮಾನದ ಮಹಿಳೆಯರಿಗಾಗಿ ಮೂರು ಕಾಲಿನ ಓಟ, ಲೆಮೆನ್ ಮತ್ತು ಸ್ಪೂನ್ (ವೈಯಕ್ತಿಕ ಕ್ರೀಡೆ), ಗೋಣಿಚೀಲ ಓಟ, ಮಡಿಕೆ ಒಡೆಯುವುದು, ಮೆಮೋರಿಟೆಸ್ಟ್, ಮ್ಯೂಸಿಕಲ್ ಚೇರ್ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

45 ಮೇಲ್ಪಟ್ಟ ಮಹಿಳೆಯರಿಗೆ ಮೆಮೋರಿಟೆಸ್ಟ್ , ಮ್ಯೂಸಿಕಲ್ ಚೇರ್, ಬಾಲ್ ಇನ್ ದ ಬಕೆಟ್ , ಲೆಮನ್ ಆಂಡ್ ಸ್ಫೂನ್ ಮತ್ತು ಮಡಿಕೆ ಒಡೆಯುವ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಬ್ಬಡಿ (ಗುಂಪು), ಥ್ರೋಬಾಲ್ (ಗುಂಪು), ಹಗ್ಗ ಜಗ್ಗಾಟ (ಗುಂಪು) ಆಟಗಳನ್ನು ಕೂಡ ಆಯೋಜಿಸಲಾಗಿದ್ದು, ಈ ಕ್ರೀಡೆಗಳಿಗೆ ಯಾವುದೇ ವಯೋಮಿತಿಯನ್ನು ನಿಗದಿಪಡಿಸಲಾಗಿಲ್ಲ. ಆದರೆ ಯಾವುದೇ ಕ್ರೀಡೆಯಲ್ಲಿ ಭಾಗವಹಿಸಲು ವಯಸ್ಸು ದೃಢೀಕರಣ ಪತ್ರ ಕಡ್ಡಾಯವಾಗಿದೆ.

ಎಲ್ಲ ಕ್ರೀಡೆಗಳಿಗೆ ನೋಂದಣಿ ಉಚಿತವಾಗಿದ್ದು, ಗೂಗಲ್ ಲಿಂಕ್: https://forms.gle/D2kQSK5jWaMJMgKB8 ಉಪಯೋಗಿಸಿ ಮಾರ್ಚ್ 6ರ ಸಂಜೆ 5 ಗಂಟೆಯೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಂಠೀರವ ಹೊರಾಂಗಣ ಕ್ರೀಡಾಂಗಣ ಕಸ್ತೂರ ಬಾ ರಸ್ತೆ, ಗೇಟ್ ನಂ.12, ಕೊಠಡಿ ಸಂಖ್ಯೆ:17-18, ಬೆಂಗಳೂರು -560 001 ಗೆ ಅಥವಾ ದೂರವಾಣಿ ಸಂಖ್ಯೆ: 080-22239771 ಗೆ ಸಂಪರ್ಕಿಸಬಹುದಾಗಿದೆ.


Share It

You cannot copy content of this page