News

ಇಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 14 ಸಾವಿರ ವಿದ್ಯಾರ್ಥಿಗಳು ಆಬ್ಸೆಂಟ್

Share It

ಬೆಂಗಳೂರು: ಬುಧವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಾದ ಪೊಲಿಟಿಕಲ್ ಸೈನ್ಸ್ ಮತ್ತು ಸ್ಟಾಟಿಸ್ಟಿಕ್ಸ್ ಪರೀಕ್ಷೆಯಲ್ಲಿ ಹಾಜರಾದ 2,12,091 ವಿದ್ಯಾರ್ಥಿಗಳ ಪೈಕಿ 13,963 ಮಂದಿ ಗೈರಾಗಿದ್ದಾರೆ.

ಈ ಪರೀಕ್ಷೆಗೆ ಒಟ್ಟಾರೆ 2,26,054 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರ ಪೈಕಿ 2,12,091 ವಿದ್ಯಾರ್ಥಿಗಳು (ಶೇ.93.82) ಪರೀಕ್ಷೆಗೆ ಹಾಜರಾಗಿದ್ದಾರೆ.

ಬಾಗಲಕೋಟೆಯಲ್ಲಿ ಗರಿಷ್ಠ 1,289 ವಿದ್ಯಾರ್ಥಿಗಳಯ ಗೈರಾಗಿದ್ದು, ಕಲಬುರಗಿ 1,199, ವಿಜಯಪುರ 1,138, ಬೀದರ್ 1,042 ಮತ್ತು ರಾಯಚೂರು 1034 ವಿದ್ಯಾರ್ಥಿಗಳು ಗೈರಾಗಿದ್ದು, ಕೊಡಗು ಭಾಗದಲ್ಲಿ ಕನಿಷ್ಠ 22 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟು ಶೇ. 93.82 ಹಾಜರಾತಿ ದಾಖಲಾಗಿದೆ.


Share It

You cannot copy content of this page