News

ಕುಡಿಯುವ ನೀರಿನ್ನು ಅನ್ಯಬಳಕೆ ಮಾಡಿದವರಿಗೆ ದಂಡದ ಬಿಸಿ ಮುಟ್ಟಿಸಿದ ಜಲಮಂಡಳಿ

Share It

ಬೆಂಗಳೂರು: ಉದ್ಯಾನ ನಗರಿಯ ಮಂದಿಗೆ ಜಲಮಂಡಳಿ ಬಿಸಿ ಮುಟ್ಟಿಸಿದ್ದು, ಕುಡಿಯುವ ನೀರಿನ ಅನ್ಯಬಳಕೆ ಮಾಡಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡವನ್ನು ವಿಧಿಸಿದೆ.

ಕುಡಿಯುವ ನೀರನ್ನು ಅನ್ಯ ಕೆಲಸಗಳಿಗೆ ಬಳಸಬಾರದು. ಬಳಕೆ ಮಾಡಿದರೆ ದಂಡ ಹಾಕಲಾಗುವುದು ಎಂದು ಜಲಮಂಡಳಿಯು ಆದೇಶಿಸಿತ್ತು. ಈ ಆದೇಶವನ್ನೂ ಲೆಕ್ಕಿಸದೇ ಕುಡಿಯುವ ನೀರನ್ನು ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ. ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿರುವ ಜಲಮಂಡಳಿಯು 20.85 ಲಕ್ಷ ದಂಡ ಹಾಕಿದೆ. ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಕೇಸ್?

*ಬೆಂಗಳೂರು ಪೂರ್ವ ವಲಯ – 105 ಪ್ರಕರಣ
ದಂಡ – 4.25 ಲಕ್ಷ ರೂಪಾಯಿ
*ಬೆಂಗಳೂರು ಪಶ್ಚಿಮ ವಲಯ – 111 ಪ್ರಕರಣ
ದಂಡ – 5.55 ಲಕ್ಷ ರೂಪಾಯಿ
*ಬೆಂಗಳೂರು ಉತ್ತರ ವಲಯ – 84 ಪ್ರಕರಣ
ದಂಡ – 3.20 ಲಕ್ಷ ರೂಪಾಯಿ
*ಬೆಂಗಳೂರು ದಕ್ಷಿಣ ವಲಯ – 115 ಪ್ರಕರಣ
ದಂಡ – 5.70 ಲಕ್ಷ ರೂಪಾಯಿ


Share It

You cannot copy content of this page