News

ಸೋಲಾರ್ ಉತ್ಪನ್ನಗಳ ಸೇವೆ ಪಡೆದು, ವಿನಾಯಿತಿಗಳಿಸುವಂತೆ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಿದ ಎಂಎಸ್ಐಎಲ್

Share It

ಬೆಂಗಳೂರು: ಸೋಲಾರ್ ಉತ್ಪನ್ನಗಳ ಸರಬರಾಜು ಹಾಗೂ ಸೇವೆಗಳನ್ನು ನೇರವಾಗಿ ಪಡೆದರೆ 4ಜಿ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಧೆ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಿದೆ.

ಎಂಎಸ್‌ಐಎಲ್ ಸಂಸ್ಥೆಯ 1966 ರಲ್ಲಿ ಸ್ಥಾಪನೆಯಾಗಿ ಕರ್ನಾಟಕ ಸರ್ಕಾರದ ಅಧೀನಕ್ಕೊಳಪಟ್ಟಿದ್ದು, ಇದು ತನ್ನ ಹಲವಾರು ಉತ್ಪನ್ನಗಳು ಮತ್ತು ಸೇವೆಗಳನ್ನು ಮಾರಾಟಮಾಡುವಲ್ಲಿ ತೊಡಗಿಸಿಕೊಂಡಿದೆ. ದೇಶಾದ್ಯಂತ ತನ್ನದೇ ಆದ ಮಾರಾಟ ಜಾಲವನ್ನು ಹೊಂದಿದೆ. ಸಂಸ್ಥೆಯ ಮಾರಾಟ ವ್ಯವಹಾರವನ್ನು ಹೆಚ್ಚಿಸುವ ಉದ್ದೇಶದಿಂದ ವಿದ್ಯಾ ಮತ್ತು ಲೇಖಕ್ ನೋಟ್ ಪುಸ್ತಕಗಳ ಮಾರಾಟ, ಚಿಟ್ಸ್ ವ್ಯವಹಾರ ಹಾಗೂ ಕೈಗಾರಿಕಾ ಉತ್ಪನ್ನಗಳಾದ ‘ಹಾಟ್ ಸ್ಪಿಂಗ್” ಸೋಲಾರ್ ವಾಟರ್ ಹೀಟರ್, ನೀರು ಶುದ್ದೀಕರಣ ಉತ್ಪನ್ನಗಳು, ಕೇಬಲ್ಸ್ ಅಂಡ್ ವೈಯರ್ಸ್ ಹಾಗೂ ಕಛೇರಿ ಪೀಠೋಪಕರಣಗಳು ಮತ್ತು ಇತರೆ ಉತ್ಪನ್ನಗಳ ಮಾರಾಟದ ಬಗ್ಗೆ ಕೂಡ ಅತಿ ಹೆಚ್ಚಿನ ಗಮನವನ್ನು ಕೊಡುತ್ತಿದೆ ಎಂದಿದೆ.

ಹಲವು ಉತ್ಪನ್ನಗಳ ಮಾರಾಟದೊಂದಿಗೆ, ಸೋಲಾರ್ ಉತ್ಪನ್ನಗಳಾದ ಸೋಲಾರ್ ವಾಟರ್ ಹೀಟರ್ಸ್, ಸೋಲಾರ್ ಲೈಟಿಂಗ್ಸ್ ಹಾಗೂ ಸೋಲಾರ್ ಉತ್ಪನ್ನಗಳಿಗೆ ಸಂಭದಪಟ್ಟ ಇತರ ಉತ್ಪನ್ನಗಳನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಎಂಎಸ್‌ಐಎಲ್ ನಿಂದ ನೇರವಾಗಿ ಖರೀದಿಸಲು ಸಂಸ್ಥೆಯು ಈಗಾಗಲೇ ಕರ್ನಾಟಕ ಸರ್ಕಾರದಿಂದ 4(ಜಿ) ವಿನಾಯಿತಿಯನ್ನು ಪಡೆದಿದೆ. ಈ ಉತ್ಪನ್ನಗಳನ್ನು ವಿಶ್ವವಿದ್ಯಾಲಯಗಳಿಗೆ ಸರಬರಾಜು ಮಾಡಲು ಹಾಗೂ ಸೇವೆಗಳನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದೆ.

ಸೋಲಾರ್ ಹೀಟ್ ಪಂಪ್‌ನಿಂದ 24×7 ಬಿಸಿನೀರಿನ ಸೌಲಭ್ಯವಾಗಿದೆ. ವಾತವರಣದ ಗಾಳಿಯಿಂದ ನೀರು ಬಿಸಿಯಾಗುವುದರಿಂದ ವಿದ್ಯುತ್ ಬಳಕೆಯು ಶೇಕಡ 75-80ರಷ್ಟು ಕಡಿಮೆಯಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಈ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸರ್ಕಾರಿ ವಸತಿನಿಲಯಗಳು ಮತ್ತು ಆಸ್ಪತ್ರೆಗಳಲ್ಲಿ ಬಹಳ ಉಪಯೋಗಕಾರಿಯಾಗಿದೆ ಎಂದು ಮಾಹಿತಿ ನೀಡಿದೆ.

ನಮ್ಮಲ್ಲಿನ ಉತ್ಪನ್ನಗಳು ಉತ್ತಮ ಗುಣಮಟ್ಟ, ವಿಶ್ವಾಸಾರ್ಹತೆ, ಸಮರ್ಥ ಮತ್ತು ದೀರ್ಘ ಬಾಳಿಕೆ ಬಗ್ಗೆ ಖಾತರಿ ಪಡಿಸಿ ಸರಬರಾಜು ಮಾಡಲು ಎಂ.ಎಸ್.ಐ.ಎಲ್ ಸಮರ್ಥವಾಗಿದೆ. ಉತ್ಪನ್ನಗಳ ಅವಶ್ಯಕತೆ ಇದ್ದಲ್ಲಿ ಎಂಎಸ್‌ಐಎಲ್ ಸಂಸ್ಥೆಯ ಮುಖಾಂತರ ಖರೀದಿಸಿ ಎಂದು ಪತ್ರದ ಮೂಲಕ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕುಲಸಚಿವರಿಗೆ ಪತ್ರದಲ್ಲಿ ಮನವಿ ಮಾಡಿದೆ.


Share It

You cannot copy content of this page