ಬೆಂಗಳೂರು: ದ್ವಿತೀಯ ಪಿಯುಸಿ ಮನೋವಿಜ್ಞಾನ, ರಸಾಯನಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಯಲ್ಲಿ 4,085 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಈ ಪರೀಕ್ಷೆಗಳಿಗೆ ಒಟ್ಟು 2,93,826 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರಲ್ಲಿ 2,89,741 ವಿದ್ಯಾರ್ಥಿಗಳು (ಶೇ.98.61) ಪರೀಕ್ಷೆಗೆ ಹಾಜರಾಗಿದ್ದಾರೆ. ಬೀದರ್‌ನಲ್ಲಿ ಗರಿಷ್ಠ 451 ವಿದ್ಯಾರ್ಥಿಗಳು ಗೈರಾಗಿದ್ದು, ಹಾಸನ 285, ಬೆಂಗಳೂರು ದಕ್ಷಿಣ 278, ವಿಜಯಪುರ 264 ಹಾಗೂ ಮಂಡ್ಯ 262 ಮಂದಿ ವಿದ್ಯಾರ್ಥಿಗಳ ಗೈರು ಹಾಜರಾತಿ ದಾಖಲಾಗಿದೆ. ಕೊಡಗಿನಲ್ಲಿ ಕನಿಷ್ಠ 5 ಮಂದಿ ಗೈರಾಗಿದ್ದಾರೆ. ಒಟ್ಟಾರೆ 98.44 ಹಾಜರಾತಿ ದಾಖಲಾಗಿದೆ.