ಬೆಂಗಳೂರು: ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆಗೆ 17,444 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದು, ಓರ್ವನನ್ನು ಡಿಬಾರ್ ಮಾಡಲಾಗಿದೆ.
ಅರ್ಥಶಾಸ್ತ್ರ ಪರೀಕ್ಷೆಗೆ ಒಟ್ಟಾರೆಯಾಗಿ 3,68,338 ಜನ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರಲ್ಲಿ 3,50,894 ವಿದ್ಯಾರ್ಥಿಗಳು (ಶೇ.95.26) ಪರೀಕ್ಷೆಗೆ ಹಾಜರಾಗಿದ್ದಾರೆ.
ಕಲಬುರಗಿಯಲ್ಲಿ ಗರಿಷ್ಠ 1,265 ವಿದ್ಯಾರ್ಥಿಗಳು ಗೈರಾಗಿದ್ದು, ಬೀದರ್ 1,221, ಬೆಂಗಳೂರು ಉತ್ತರ 982, ವಿಜಯಪುರ 924, ತುಮಕೂರು 916 ಹಾಗೂ ಚಿಕ್ಕೋಡಿ 908 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇನ್ನೂ ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 57 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು ಶೇ.95.26 ಹಾಜರಾತಿ ದಾಖಲಾಗಿದೆ.
ಓರ್ವ ವಿದ್ಯಾರ್ಥಿ ಡಿಬಾರ್:
ಬೆಂಗಳೂರು ಉತ್ತರದ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಉತ್ತರವನ್ನು ಕಾಪಿ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು ಈ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಪರೀಕ್ಷೆಯ ಮುಖ್ಯ ಅಧೀಕ್ಷಕರು ವರದಿ ನೀಡಿದ್ದಾರೆ.