News

ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಜಾತಿ ಹೆಸರನ್ನು ಸೇರಿಸಲು ಇಲ್ಲಿದೆ ಅವಕಾಶ

Share It

ಬೆಂಗಳೂರು: ಸಾರ್ವಜನಿಕರು ಅಥವಾ ವಿವಿಧ ಜಾತಿ/ಸಮುದಾಯದವರು, ಸಂಘ ಸಂಸ್ಥೆಗಳು ಹಿಂದುಳಿದ ವರ್ಗಗಳ ಪಟ್ಟಿಗೆ ಹೊಸದಾಗಿ ಜಾತಿ ಹೆಸರನ್ನು ಸೇರಿಸುವ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೆಚ್ಚಾಗಿ ಸೇರಿಸಲಾಗಿದೆ ಎಂದು ಕಂಡುಬಂದಲ್ಲಿ ಅಂತಹ ಜಾತಿಗಳನ್ನು ಕೈಬಿಡುವ ಕುರಿತಂತೆ ಹಾಗೂ ಇತರ ಮನವಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಆಯೋಗವನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿದಾರರು ತಮ್ಮ ಮನವಿಯನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ದೇವರಾಜ ಅರಸು ಭವನ 2ನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560052 ಇವರಿಗೆ ಸಲ್ಲಿಸಬಹುದಾಗಿದೆ.

ಜಿಲ್ಲಾ ಹಂತದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಥವಾ ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ದಾಖಲೆಗಳನ್ನು ನೀಡಬಹುದಾಗಿದೆ.


Share It

You cannot copy content of this page