ಬೆಂಗಳೂರು: ಕೆಸೆಟ್ ಅರ್ಹತೆ ಪಡೆದವರ ಮೂಲ ದಾಖಲೆಗಳ ಪರಿಶೀಲನೆಗೆ ದಿನಾಂಕ ನಿಗದಿಯಾಗಿದೆ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2024 ಮತ್ತು 2023 ಸಾಲಿನಲ್ಲಿ ಅರ್ಹತೆ ಪಡೆದವರ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ಪ್ರಮಾಣ ಪತ್ರಗಳನ್ನು ಏಪ್ರಿಲ್ 4ರಂದು ನೀಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಇದುವರೆಗೂ ಪರಿಶೀಲನೆಗೆ ಗೈರಾದವರು ಹಾಗೂ ಸ್ನಾತಕೋತ್ತರ ಪದವಿಯ ಫಲಿತಾಂಶವನ್ನು ಇತ್ತೀಚೆಗೆ ಪಡೆದವರು ಅಂದು ಕೆಇಎ ಕಚೇರಿಗೆ ಬಂದು, ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡು, ಪ್ರಮಾಣ ಪತ್ರಗಳನ್ನು ಪಡೆಯಬಹುದು ಎಂದು ಮಾಹಿತಿ ನೀಡಿದೆ.