Education News

ಯುಜಿಸಿಇಟಿ ಪರೀಕ್ಷೆಯ ನಂತರ ತಿದ್ದುಪಡಿಗೆ ಸಿಗಲಿದೆ ಆವಕಾಶ

Share It

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಯುಜಿಸಿಇಟಿ-25 ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ನಮೂದಿಸಿದ್ದ ದೋಷಗಳನ್ನು ಸರಿಪಡಿಸಿಕೊಳ್ಳಲು ಸಿಇಟಿ ಪರೀಕ್ಷೆ ನಂತರ ಅವಕಾಶ ನೀಡುತ್ತಿದೆ.

ಯುಜಿ ಸಿಇಟಿ ಪರೀಕ್ಷೆ ಏಪ್ರಿಲ್‌ 16 ಮತ್ತು 17ರಂದು ನಡೆಯಲಿದೆ. ಹೊರನಾಡು ಗಡಿನಾಡು ಕನ್ನಡಿಗರಿಗೆ ಏ.15ರಂದು ಕನ್ನಡ ಪರೀಕ್ಷೆ ನಿಗದಿಪಡಿಸಲಾಗಿದೆ. ಇದಕ್ಕೆ ಸದ್ಯದಲ್ಲೇ ಪ್ರವೇಶ ಪತ್ರ ಡೌನ್‌ಲೋಡ್ ಗೆ ಅವಕಾಶ ನೀಡಲಾಗುತ್ತಿದೆ. ಈ ಪರೀಕ್ಷೆ ಬಳಿಕ ಎಡಿಟಿಂಗ್‌ಗೆ ಅವಕಾಶ ಸಹ ಇರಲಿದೆ.

ಪ್ರಸಕ್ತ ಸಾಲಿಗೆ ಒಟ್ಟು 3,64,778 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 3,44,989 ಮಂದಿ ಶುಲ್ಕ ಪಾವತಿಸಿದ್ದಾರೆ. ಈ ಪೈಕಿ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯ ಮೂಲಕವೇ 1.36 ಲಕ್ಷ ಅಭ್ಯರ್ಥಿಗಳ ದಾಖಲೆಗಳು ಆನ್‌ಲೈನ್‌ನಲ್ಲಿ ಪರಿಶೀಲನೆಗೆ ಒಳಗಾಗಿವೆ. ಹಾಗೆಯೇ 1.64 ಲಕ್ಷ ಮಂದಿ ಕಾಲೇಜುಗಳಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಂಡು ಅರ್ಹತೆ ಪಡೆದಿದ್ದಾರೆ. ಇನ್ನೂ ಸುಮಾರು 44 ಸಾವಿರ ಅಭ್ಯರ್ಥಿಗಳು ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕಿದ್ದು, ಅವರಲ್ಲಿ ಯಾರ ಕ್ಲೇಮ್ ಚೀಟಿಯಲ್ಲಿ ಪರಿಶೀಲನೆ ಆಗಿಲ್ಲ ಎಂದು ನಮೂದಾಗಿರುತ್ತದೊ ಅಂತಹವರು ಸಂಬಂಧಪಟ್ಟ ಪಿಯು ಕಾಲೇಜು ಅಥವಾ ಹತ್ತಿರದ ಸರ್ಕಾರಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಪರಿಶೀಲನೆ ಮಾಡಿಸಿಕೊಳ್ಳಬಹುದಾಗಿದೆ.


Share It

You cannot copy content of this page