ಬೆಂಗಳೂರು: 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಾ.27 ರಂದು ಮಂಡನೆಯಾಗಲಿದೆ.
ಈಗಾಗಲೇ ಅಧಿಕಾರ ಮಟ್ಟದಲ್ಲಿ ಪೂರ್ವಭಾವಿ ಸುತ್ತಿನ ಹಲವು ಮಹತ್ವದ ಸಭೆಗಳು ಪೂರ್ಣಗೊಂಡು ಒಂದು ಹಂತಕ್ಕೆ ಆಯವ್ಯಯ ರೂಪುಗೊಂಡಿದೆ. ಜನಪ್ರತಿನಿಧಿಗಳಿಲ್ಲದ ಸತತ 5ನೇ ಬಾರಿಯ ಬಜೆಟ್ ಇದಾಗಿದೆ.
ನಗರದ ಪುರಭವನದಲ್ಲಿ ಮಾ.27ರಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ಬಜೆಟ್ ಮಂಡಿಸಲಿದ್ದಾರೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಫುಟ್ ಪಾತ್, ಪರಿಸರ, ಶಿ ಟಾಯ್ಲೆಟ್ ಸೇರಿದಂತೆ ಇತರ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಸ್ಥಾನ ಪಡೆಯಲಿದೆ.