ಬೆಂಗಳೂರು: ಭಾರತ ಸರ್ಕಾರದ ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಮಂತ್ರಾಲಯದಡಿ ಬರುವ ರಾಷ್ಟ್ರೀಯ ವೃತ್ತಿಸೇವಾ ಕೇಂದ್ರದ ವತಿಯಿಂದ ವಿಶೇಷಚೇತನರಿಗಾಗಿ ಏಪ್ರಿಲ್ 3 ರಂದು ಉದ್ಯೋಗಮೇಳ ನಡೆಯಲಿದೆ.
ಅಂದು 10.30 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಂ. ಎ-147, ಬಿ-1ನೇ ಮುಖ್ಯರಸ್ತೆ, ಮೊದಲನೇ ಹಂತ, ಪೀಣ್ಯ ಪೊಲೀಸ್ ಠಾಣೆ ಹಿಂಭಾಗ, ಬೆಂಗಳೂರು ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಪಂಚತಾರಾ ಹೋಟೆಲ್‍ಗಳಲ್ಲಿ ಹೌಸ್ ಕೀಪಿಂಗ್, ರಿಸೆಪ್ಷನಿಸ್ಟ್ ಮುಂತಾದ ಕೆಲಸಗಳಿಗೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಮೇಳದಲ್ಲಿ 15 ಹುದ್ದೆಗಳಿದ್ದು, 10 ನೇ ತರಗತಿ ಹಾಗೂ ಅದಕ್ಕಿಂತ ಹೆಚ್ಚು ಓದಿದವರೂ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಲ್ಲದೇ ಪೀಣ್ಯದಲ್ಲಿರುವ ಡಿಹೆಚ್‍ಎಲ್ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಉತ್ಪನ್ನಗಳ ಲೋಡಿಂಗ್ ಮುಂತಾದ ಕೆಲಸಗಳಿಗೆ 20 ಹುದ್ದೆಗಳು ಖಾಲಿಯಿದ್ದು, 5 ರಿಂದ 10 ನೇ ತರಗತಿ ಓದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಉದ್ಯೋಗಗಳಿಗೆ ಶ್ರವಣದೋಷವಿರುವ ಪುರುಷ ವಿಶೇಷಚೇತನರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ-ವಿಶೇಷಚೇತನರಿಗಾಗಿ, ನಂ. ಎ-147, ಬಿ-1ನೇ ಮುಖ್ಯರಸ್ತೆ, ಮೊದಲನೇ ಹಂತ, ಪೀಣ್ಯ ಪೊಲೀಸ್ ಠಾಣೆ ಹಿಂಭಾಗ, ಪೀಣ್ಯ, ಬೆಂಗಳೂರು-560058 ಹಾಗೂ ದೂರವಾಣಿ ಸಂಖ್ಯೆ -080-28392907 ಗೆ ಸಂಪರ್ಕಿಸಬಹುದಾಗಿದೆ.