News

ಮಧ್ಯರಾತ್ರಿಯೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ ಬಿಬಿಎಂಪಿಯಿಂದ ಬೀಳಲಿದೆ ದುಪ್ಪಟ್ಟು ಮೊತ್ತದ ಬರೆ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಸೋಮವಾರ ಕೊನೆಯ ದಿನವಾಗಿದ್ದು, ಮಾರ್ಚ್ 31ರಂದು ಪಾವತಿಸಲು ವಿಫಲವಾದರೆ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಬಿಬಿಎಂಪಿ ಒಟಿಎಸ್‌ಗೆ ನೀಡಿದ್ದ ಅವಕಾಶವನ್ನು ಹಲವು ಬಾರಿ ವಿಸ್ತರಿಸಿ ಅಂತಿಮವಾಗಿ ಮಾರ್ಚ್ 31ರ ಗಡುವನ್ನು ವಿಧಿಸಿತ್ತು. ಆದರೆ ಸೋಮವಾರ ಆಸ್ತಿ ತೆರಿಗೆ ಪಾವತಿಗೆ ಕೊನೆಯ ದಿನವಾಗಿದ್ದು, ಪಾವತಿಸಲು ಬಾಕಿ ಉಳಿಸಿಕೊಂಡವರು ಏಪ್ರಿಲ್ 1ರಿಂದ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಜತೆಗೆ ಶೇಕಡಾ 9ರಷ್ಟು ಬಡ್ಡಿಯನ್ನು ಕೂಡಾ ಪಾವತಿಸಬೇಕಿದೆ.

ಪಾಲಿಕೆಗೆ 400 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಬರಬೇಕಿದ್ದು, ಇವುಗಳಲ್ಲಿ ಕೆಲವು ಸರಕಾರಿ ಕಟ್ಟಡಗಳ ಆಸ್ತಿ ತೆರಿಗೆ ಕೂಡ ಬಾಕಿಯಿದ್ದು, ತೆರಿಗೆ ಬಾಕಿ ಪಾವತಿಸಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕುವ ಸಾಧ್ಯತೆಯೂ ಇದೆ. ಪಾಲಿಕೆಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,200 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4,800 ಕೋಟಿ ರೂಪಾಯಿ ಮಾತ್ರ ವಸೂಲಿ ಆಗಿದೆ. ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ವಸೂಲಿ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.


Share It

You cannot copy content of this page