ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿ ದೀಕ್ಷಾ 600ಕ್ಕೆ 600 ಅಂಕ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಇತ್ತೀಚಿಗೆ ನಡೆದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ರಾಜ್ಯಕ್ಕೆ ಜಂಟಿಯಾಗಿ ಪ್ರಥಮ ಸ್ಥಾನ ಪಡೆದಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ ಅವರಿಗೆ 600ಕ್ಕೆ 600 ಅಂಕ ಸಿಕ್ಕಿದ್ದು, ಇದರಿಂದ ಹೊಸ ಇತಿಹಾಸ ನಿರ್ಮಾಣವಾಗಿದೆ.
ಪರೀಕ್ಷೆಯ ಫಲಿತಾಂಶ ಏ. 7 ರಂದು ಪ್ರಕಟವಾಗಿತ್ತು, ಈ ಮೊದಲು ರಸಾಯಶಾಸ್ತ್ರ ವಿಷಯದಲ್ಲಿ ದೀಕ್ಷಾ ಅವರಿಗೆ 100 ಕ್ಕೆ 99 ಅಂಕ ಬಂದಿತ್ತು. ಇಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದು, 100ಕ್ಕೆ 100 ಅಂಕ ಪಡೆಡಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.