News

ಭಯೋತ್ಪಾದಕರ ದಾಳಿಗೆ ಬಲಿಯಾದ ಭರತ್ ಭೂಷಣ್ ಕುಟುಂಬಕ್ಕೆ ಎಂಇಐ ಸಂಸ್ಥೆಯಿಂದ ಆರ್ಥಿಕ ನೆರವು

Share It

ಬೆಂಗಳೂರು: ಭಯೋತ್ಪಾದಕರ ದಾಳಿಗೆ ಬಲಿಯಾದ ಭರತ್ ಭೂಷಣ್ ಕುಟುಂಬಕ್ಕೆ ಎಂಇಐ ಸಂಸ್ಥೆಯಿಂದ ಒಂದು ಲಕ್ಷ ಮೊತ್ತದ ಆರ್ಥಿಕ ನೆರವನ್ನು ನೀಡಲಾಯಿತು.

ಶನಿವಾರ ಭರತ್ ಭೂಷಣ್ ಅವರ ಮತ್ತಿಕೆರೆಯ ನಿವಾಸಕ್ಕೆ ಎಂಇಐ ಕಂಪನಿಯ ಅಧ್ಯಕ್ಷ ಎಸ್. ಮನೋಹರ್, ವ್ಯವಸ್ಥಾಪಕ ನಿರ್ದೇಶಕಿ ಡಿ ಪದ್ಮಾವತಿ ಹಾಗೂ ಅಧಿಕಾರಿಗಳು ತೆರಳ ಅವರ ಧರ್ಮಪತ್ನಿಯಾದ ಸುಜಾತ ರವರಿಗೆ ಒಂದು ಲಕ್ಷ ರೂಪಾಯಿ ಅರ್ಥಿಕ ಸಹಾಯವನ್ನು ಸಂಸ್ಥೆಯ ವತಿಯಿಂದ ನೀಡಿದರು.

ಈ ಸಂದರ್ಭದಲ್ಲಿ ಭರತ್ ಭೂಷಣ್ ಅವರ ಧರ್ಮಪತ್ನಿ ಹಾಗೂ ಅವರ ಮಗು ಹಾಗೂ ಭರತ್ ಭೂಷಣ್ ರವರ ತಂದೆಯನ್ನ ಭೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಲಾಯಿತು, ಕಾಶ್ಮೀರದಲ್ಲಿ ನಡೆದ ಅತ್ಯಂತ ಹೇಯ ಕೃತ್ಯವನ್ನು ಈ ಸಂದರ್ಭದಲ್ಲಿ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉಗ್ರಗಾಮಿಗಳನ್ನ ಸದೆ ಬಡಿಯುವಂತೆ ಒತ್ತಾಯಿಸಲಾಯಿತು.

ಸುಜಾತ ಕಾಶ್ಮೀರದಲ್ಲಿ ದಾಳಿ ನಡೆದ ಸಂದರ್ಭದಲ್ಲಿ ಅತ್ಯಂತ ಧೈರ್ಯದಿಂದ ಉಗ್ರಗಾಮಿಗಳ ಬೆದರಿಕೆಯನ್ನು ದಿಟ್ಟತನದಿಂದ ಎದುರಿಸಿ ಮಗುವನ್ನು ಅತ್ಯಂತ ಸುರಕ್ಷತೆಯಿಂದ ಕರೆ ತಂದಿರುವ ಅವರ ಧೈರ್ಯವನ್ನು ಇಡೀ ದೇಶ ಮೆಚ್ಚುವಂತದ್ದಾಗಿದೆ. ಉಗ್ರಗಾಮಿಗಳ ಗುಂಡಿಗೆ ಬಲಿಯಾದಂತಹ ಮುಗ್ಧರ ಆತ್ಮಕ್ಕೆ ಶಾಂತಿಯನ್ನ ಕೋರುತ್ತೇನೆ. ಉಗ್ರಗಾಮಿಗಳನ್ನು ಒಕ್ಕೂರಲನಿಂದ ಸೆದೆಬಡಿಯಬೇಕು ಎಂದು ಎಂಇಐ ಅಧ್ಯಕ್ಷ ಎಸ್. ಮನೋಹರ್ ಹೇಳಿದರು.

ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಶರಣಪ್ಪ, ತಿಮ್ಮಣ್ಣ, ಸಂತೋಷ್, ಕೀರ್ತಿ ಹಾಗೂ ರೇಖಾ ಉಪಸ್ಥಿತರಿದ್ದರು.


Share It

You cannot copy content of this page