ಬೆಂಗಳೂರು: ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಗೇಟ್ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.
ಜೈನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ ತನ್ನ ಅತ್ಯಂತ ಬೇಡಿಕೆಯ ಎಂ.ಟೆಕ್ ಸ್ನಾತಕೋತ್ತರ ಪದವಿಗೆ ಈ ವಿಶೇಷ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಆಹಾರ ತಂತ್ರಜ್ಞಾನ, ಏರೋಸ್ಪೇಸ್ ಪ್ರೊಪಲ್ಷನ್ ತಂತ್ರಜ್ಞಾನ, ಏರೋಡೈನಾಮಿಕ್ಸ್ ಎಂಜಿನಿಯರಿಂಗ್, ವಿಎಲ್‌ಎಸ್‌ಐ ಮತ್ತು ಎಂಬೆಡೆಡ್ ಸಿಸ್ಟಮ್ಸ್ ವಿನ್ಯಾಸ, ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ನಂತರ ವಿಭಾಗಗಳು ಇದರಲ್ಲಿ ಸೇರಿವೆ.
ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಪ್ರತಿ ವಿಭಾಗದ ಒಬ್ಬ ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿವೇತನವು ಮೊದಲ ವರ್ಷದ ಬೋಧನಾ ಶುಲ್ಕದ 50% ಅನ್ನು ಒಳಗೊಂಡಿದೆ. ನಂತರದ ವರ್ಷದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುವುದನ್ನು ಮುಂದುವರಿಸಲು, ವಿದ್ಯಾರ್ಥಿಗಳು ಕನಿಷ್ಠ 60% ಶೈಕ್ಷಣಿಕ ಅಂಕಗಳನ್ನು ಕಾಯ್ದುಕೊಳ್ಳಬೇಕಿದೆ.
ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಮಾನ್ಯವಾದ ಗೇಟ್ ಅಂಕಗಳೊಂದಿಗೆ ಭಾರತೀಯ ಪ್ರಜೆಗಳಾಗಿರಬೇಕು ಮತ್ತು ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ) ನೀಡುವ ಎಂ.ಟೆಕ್ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಿರಬೇಕು. ಗೇಟ್ ಮೂಲಕ ಅರ್ಹತೆ ಪಡೆದ ವಿದ್ಯಾರ್ಥಿಗಳು ಜೈನ್ ಪ್ರವೇಶ ಪರೀಕ್ಷೆ (ಜೆಟ್) ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ. ಬದಲಾಗಿ, ಅವರು ನೇರವಾಗಿ ಆನ್‌ಲೈನ್ ವೈಯಕ್ತಿಕ ಸಂದರ್ಶನ ಸುತ್ತಿಗೆ ಹಾಜರಾಗಬಹುದಾಗಿದೆ.