Education News

ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

Share It

ಬೆಂಗಳೂರು: 2025-26ನೇ ಸಾಲಿನ -ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳು ಆರಂಭವಾಗಲಿವೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳೆದ ವರ್ಷವೂ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಿತ್ತಾದರೂ ಅದು ಅಷ್ಟೇನೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪೂರ್ಣ ಪ್ರಮಾಣದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ನಿಶ್ಚಯಿಸಿದೆ. ಈ ಸಂಬಂಧ ಇಲಾಖೆಯು ಅತ್ಯುತ್ತಮ ಸಂಪನ್ಮೂಲವುಳ್ಳ ವ್ಯವಸ್ಥೆ ಜಾರಿಗೆ ಯೋಜನೆ ರೂಪಿಸಿದೆ.

ಇ ಲಾಖೆ ಕಳೆದ ವರ್ಷ ವಾರಾಂತ್ಯದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸುವುದಕ್ಕೆ ಚಾಲನೆ ನೀಡಿತ್ತು. ರಿಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಗೆ ಬೋಧಕರಿಗೆ ರಾಜ್ಯ ಮಟ್ಟದ ತರಬೇತಿ ನೀಡಲು ಸೂಚಿಸಲಾಗಿತ್ತು.ಆದರೆ, ಈ ಕಾರ್ಯಕ್ರಮ ಜಾರಿಯೇ ಆಗಲಿಲ್ಲ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ವರ್ಷ ವ್ಯವಸ್ಥಿತವಾಗಿ ಯೋಜನೆ ಜಾರಿಗೆ ಮುಂದಡಿಯಿಟ್ಟಿದೆ.

ಹೊಸ ಯೋಜನೆಯನ್ವಯ ವರ್ಷಕ್ಕೆ 180 ಗಂಟೆಗಳ ಕಾಲ ಸ್ಪೋಕನ್ ಇಂಗ್ಲೀಷ್, ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಈ ಯೋಜನೆಯು ಸರಿಸುಮಾರು 1000 ಶಾಲೆಗಳಲ್ಲಿ ಜಾರಿಗೆ ಬರಲಿದೆ. ವಿದ್ಯಾರ್ಥಿಗಳ ಸಾಂದ್ರತೆಗನುಗುಣವಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳೂ ಇವೆ.

ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲೂ ಸಹ ಈ ಯೋಜನೆ ಜಾರಿಗೆ ಬರಲಿದ್ದು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳಲೆಂದೇ ವಿಶೇಷವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.


Share It

You cannot copy content of this page