ಬೆಂಗಳೂರು: ನಗರದ ಅಪೋಲೋ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೋಲ್ಪಿಟ್ ಸೆಂಟರ್ಸ್ ಅನ್ನು ಪ್ರಾರಂಭಿಸಲಾಗುತ್ತಿದ್ದು, ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಸಮಗ್ರ ಗುದನಾಳದ ಕ್ಯಾನ್ಸರ್ ಪತ್ತೆ ಹಚ್ಚುವುದು ಇದರ ಅಗತ್ಯವಾಗಿದೆ ಎಂದು ಅಪೋಲೋ ಕ್ಯಾನ್ಸರ್ ಸೆಂಟರ್ ನ ಸರ್ಜಿಕಲ್ ಅಂಕೊಲಾಜಿ ವಿಭಾಗದ ಹಿರಿಯ ಸಲಹೆಗಾರ ಡಾ. ಯಶ್ವಂತ್ ಆರ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಯಾನ್ಸರ್ ಪೂರ್ವ ಹಂತದಲ್ಲಿ ರೋಗ ಪತ್ತೆಯಾದರೆ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ಎಂಡೋಸ್ಕೋಪಿಕ್ ಮೂಲಕ ಚಿಕಿತ್ಸೆ ನೀಡಿಬಹುದಾಗಿದೆ. ಹಂತ-1,2 ರ ಎಲ್ಲಾ ಪ್ರಕರಣಗಳಿಗೆ ವಿಕಿರಣ ಮತ್ತು ಕಿಮೋಥೆರಪಿ ಅಗತ್ಯವಿಲ್ಲದಿದ್ದಾಗ ಶಸ್ತ್ರಚಿಕಿತ್ಸೆಯ ಮೂಲಕ ಈ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಅಪೋಲೋ ಆಸ್ಪತ್ರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸಚಿನ ಎಸ್ ಶೆಟ್ಟಿ ಮಾತನಾಡಿ, ಭಾರತದಲ್ಲಿ ಯುವ ಮತ್ತು ವೃದ್ಧ ಜನಸಂಖ್ಯೆಯ ಮೇಲೆ ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಆದರೆ ತಡವಾದ ರೋಗನಿರ್ಣಯಗಳಿಂದ ಬದುಕುಳಿಯುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದರು.
ಅಪೋಲೋ ಹಾಸ್ಪಿಟಲ್ ಎಂಟರ್ ಪ್ರೆಸ್ ಲಿಮಿಟೆಡ್ ನ ಗ್ರೂಪ್ ಅಂಕೋಲಾಜಿ ಅಧ್ಯಕ್ಷ ದಿನೇಶ್ ಮಾಧವನ್ ಮಾತನಾಡಿ ಪ್ರಾಯೋಗಿಕ ನಾವೀನ್ಯತೆ ಮತ್ತು ವ್ಯಾಪಕ ಉಪಯೋಗದ ಮೂಲಕ ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸುವ ಅಪೋಲೋ ಆಸ್ಪತ್ರೆಯ ಸಮರ್ಪಣೆಯನ್ನು ಕೋಲ್ಬಿಟ್ ಪ್ರತಿನಿಧಿಸುತ್ತದೆ ಎಂದು ಮಾಹಿತಿ ನೀಡಿದರು.