ಬೆಂಗಳೂರು: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ನಿರ್ದೇಶಕರಾಗಿ ಹರಿ ಕುಮಾರ್ ಆರ್ ನೇಮಕಗೊಂಡಿದ್ದಾರೆ.
ಹರಿ ಕುಮಾರ್ ಕೇರಳದ ತಿರುವನಂತಪುರದ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಟೆಕ್ ಪೂರ್ಣಗೊಳಿಸಿದ ನಂತರ ಬಿಇಎಲ್ ನಲ್ಲಿ ಪ್ರೊಬೇಷನರಿ ಎಂಜಿನಿಯರ್ ಆಗಿ ಸೇರಿದ್ದರು. ಮೂರುವರೆ ದಶಕಗಳಿಗೂ ಹೆಚ್ಚಿನ ವೃತ್ತಿ ಜೀವನದಲ್ಲಿ ಹೆಚ್ಚಾಗಿ ಅಭಿವೃದ್ಧಿ ಮತ್ತು ಎಂಜನಿಯರಿಂಗ್ ನಲ್ಲಿ ಕೆಲಸ ಮಾಡಿದ್ದಾರೆ.
ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ ಸಮಿತಿಯು ಸಂದರ್ಶಿಸಿದ 7 ಅಭ್ಯರ್ಥಿಗಳ ಪಟ್ಟಿಯಿಂದ ಕುಮಾರ್ ಅವರನ್ನು ಬಿಇಎಲ್ ನ ನಿರ್ದೇಶಕ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಏಳು ಅಭ್ಯರ್ಥಿಗಳಲ್ಲಿ ಆರು ಅಭ್ಯರ್ಥಿಗಳು ಬಿಇಎಲ್ ನಿಂದ ಬಂದವರು ಮತ್ತು ಒಬ್ಬರು ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ನಿಂದ ಬಂದಿದ್ದರು, ಈ ಪೈಕಿ ಹರಿ ಕುಮಾರ್ ಅಂತಿಮವಾಗಿ ನಿರ್ದೇಶಕರ ಹುದ್ದೆಗೆ ಆಯ್ಕೆಯಾಗಿದ್ದಾರೆ.