ಬೆಂಗಳೂರು: 2025-26ನೇ ಸಾಲಿನ ಕೃಷಿ ಕೋಟಾದ ದಾಖಲಾತಿ ಪರಿಶೀಲನೆ ಮತ್ತು ಪ್ರಾಯೋಗಿಕ ಪರೀಕ್ಷೆಯ ಅನರ್ಹರ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಕೃಷಿ ಕೋಟಾಕ್ಕೆ ಅರ್ಹವಾದ ಪೂರಕ ದಾಖಲೆಗಳನ್ನು ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಸಲ್ಲಿಸಲು ಮೇ. 5 ರವರೆಗೆ ಅವಧಿ ವಿಸ್ತರಿಸಲಾಗಿದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಎಂದು ತಿಳಿಸಿದೆ.
ರಾಜ್ಯದ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಜ್ಞಾನಗಳ ವಿವಿಧ ಸ್ನಾತಕ ಪದವಿಗಳ ಪ್ರವೇಶಾತಿಗೆ ಪೂರಕವಾಗಿ ನಡೆಸಲಾಗುವ ದಿನಾಂಕಗಳಿಗೆ ಸಂಬಂಧಿಸಿದಂತೆ ಅನರ್ಹರ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಕೃಷಿ ಕೋಟಾಕ್ಕೆ ಪೂರಕವಾದ ಸೂಕ್ತ ದಾಖಲೆಗಳನ್ನು ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಖುದ್ದು ಸಲ್ಲಿಸಲು ಈ ಮೊದಲು ಏ. 29ರವರೆಗೆ ಕಾಲಾವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು/ಪೋಷಕರ ಮನವಿಯ ಮೇರೆಗೆ ಇದೀಗ ಅವಧಿ ವಿಸ್ತರಿಸಿದೆ.