ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಸೇರಿದಂತೆ ಎಂ.ಆರ್ಕ್ ಪಿಜಿ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ. 31 ರಂದು ಮತ್ತು ಜೂ. 22 ರಂದು ನಡೆಯಲಿದೆ.
ಮೇ. 31 ರಂದು ಮಧ್ಯಾಹ್ನ 2.30 ರಿಂದ 4.30ರವರೆಗೆ ಎಂ.ಇ, ಎಂ.ಟೆಕ್ ಮೊದಲನೇ ಸೆಮಿಸ್ಟರ್ ಪ್ರವೇಶ ಪರೀಕ್ಷೆ ನಡೆಯಲಿದೆ. ಜೂ. 22 ರಂದು ಬೆಳಗ್ಗೆ 10.30 ರಿಂದ 12.30ರವರೆಗೆ ಎಂಸಿಎ ಕೋರ್ಸಗಳಿಗೆ ಮತ್ತು ಮಧ್ಯಾಹ್ನ 2.30 ರಿಂದ 4.30ರವರೆಗೆ ಎಂ.ಬಿ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ನಿಗದಿಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಪಿಜಿಸಿಇಟಿ-2025ಕ್ಕೆ ಮೇ. 10ರ ಒಳಗಾಗಿ ಆನ್ ಲೈನ್ ಮೂಲಕ ನೊಂದಣಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಮೇ. 12ರ ಒಳಗಾಗಿ ಶುಲ್ಕವನ್ನು ಪಾವತಿಸಬಹುದಾಗಿದೆ. ಪಾವತಿಸಿರುವ ಶುಲ್ಕ ರಸೀದಿಯು ದೃಢಪಟ್ಟ ನಂತರವೇ ಆಭ್ಯರ್ಥಿಗಳಿಗೆ ಪಿಜಿಸಿಇಟಿ -2025 ಪರೀಕ್ಷೆಗೆ ಆಡ್ಮಿಶನ್ ಟಿಕೆಟ್ ಅನ್ನು ಡೌನಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ