Job News

ಕೆ.ಪಿ.ಎಸ್.ಸಿ ಗ್ರೂಪ್ ಸಿ ವೃಂದದ ಪರೀಕ್ಷೆ ಪ್ರವೇಶ ಪತ್ರ ಡೌನ್ ಲೋಡ್ ಗೆ ಅವಕಾಶ

Share It

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರ ಉಳಿಕೆ ಮೂಲ ವೃಂದದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಇಂದಿನಿಂದ ( ಬುಧವಾರ) ದಿಂದ ಡೌನ್ ಲೋಡ್ ಗೆ ಅವಕಾಶ ಮಾಡಿಕೊಡಲಾಗಿದೆ.

ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆಯೋಗದ ವೆಬ್ ಸೈಟ್ https://kpsc.kar.in ನಿಂದ ಡೌನಲೋಡ್ ಮಾಡಿಕೊಳ್ಳಬಹುದು. ಮೇ. 13 ರಂದು ಅಪರಾಹ್ನ ಕನ್ನಡ ಭಾಷಾ ಪರೀಕ್ಷೆ, ಮೇ. 14 ರಂದು ಪೂರ್ವಾಹ್ನ ಪತ್ರಿಕೆ-1 ಮತ್ತು ಅಪರಾಹ್ನ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.


Share It

You cannot copy content of this page