ಬೆಂಗಳೂರು: ಐಪಿಎಲ್ ಪಂದ್ಯಗಳ ಕಾರಣಕ್ಕೆ ಮೆಟ್ರೋ ಅವಧಿಯನ್ನು ವಿಸ್ತರಿಸಿದ್ದ ಬಿ.ಎಂ.ಆರ್.ಸಿ.ಎಲ್ ಇದೀಗ ಅದನ್ನು ರದ್ದು ಗೊಳಿಸಲು ತೀರ್ಮಾನಿಸದೆ.
ರಾಜಧಾನಿ ಬೆಂಗಳೂರಿನಲ್ಲಿ ಮೇ. 13 ಮತ್ತು 17ರಂದು ಐಪಿಎಲ್ ಹಿನ್ನೆಲೆ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ 1.30ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಐಪಿಎಲ್ ಪಂದ್ಯಗಳು ರದ್ದಾಗಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಅವಧಿಯ ವಿಸ್ತರಣೆಯನ್ನು ರದ್ದುಗೊಳಿಸಲಾಗಿದೆ.
ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಸಾಮಾನ್ಯ ಸೇವೆ ವೇಳಾಪಟ್ಟಿ ಅನುಸಾರವಾಗಿ ನಿರ್ವಹಿಸಲಾಗುವುದು ಎಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ.