Education News

ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ; ಜೂನ್ 2ರಿಂದ ತರಗತಿ ಪ್ರಾರಂಭ

Share It

ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನ ಪಿಯುಸಿ ಶೈಕ್ಷಣಿಕ ವರ್ಷವು ಜೂನ್ 2 ರಂದು ಪ್ರಾರಂಭವಾಗಲಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ನೂತನ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆಮಾಡಿದ್ದು, ಮೊದಲ ಅವಧಿಯು ಜೂನ್ 2 ರಿಂದ ಸೆಪ್ಟೆಂಬರ್ 21ರ ವರೆಗೆ ಮತ್ತು ಎರಡನೇ ಅವಧಿಯು ಅಕ್ಟೋಬರ್ 8 ರಿಂದ 2026ರ ಮಾರ್ಚ್ 31ರ ವರೆಗೆ ನಡೆಯಲಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ಮಧ್ಯಂತರ ರಜೆ ಇರಲಿದೆ.

ಜೂ.16ರಿಂದ ಪ್ರಾಯೋಗಿಕ ತರಗತಿಗಳು ಪ್ರಾರಂಭವಾಗಲಿದ್ದು, ಆಗಷ್ಟ್ 11ರಿಂದ 14ರ ವರೆಗೆ ಪ್ರಥಮ ಕಿರು ಪರೀಕ್ಷೆ, ಅಕ್ಟೋಬರ್ 9ರಿಂದ 27ರ ವರೆಗೆ ಮಧ್ಯವಾರ್ಷಿಕ ಪರೀಕ್ಷೆ ಜರುಗಲಿವೆ. ಡಿಸೆಂಬರ್ 19ರಿಂದ 23ರ ವರೆಗೆ ಎರಡನೇ ಕಿರು ಪರೀಕ್ಷೆ ಹಾಗೂ 2026ರ ಜನವರಿ 5ರಿಂದ 20ರ ವರೆಗೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳು, ಜನವರಿ 21ರಿಂದ ಫೆಬ್ರವರಿ 14ರವರೆಗೆ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ನಡೆಯಲಿವೆ.

ಫೆಬ್ರವರಿ 10ರಿಂದ 25ರವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ನೆಡೆಯಲಿದ್ದು, ಮಾರ್ಚ್ 31ಕ್ಕೆ ಫಲಿತಾಂಶ ಪ್ರಕಟಣೆಗೊಳ್ಳಲಿದೆ, ಇನ್ನು ಫೆ.26ರಿಂದ ಮಾ.21ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.


Share It

You cannot copy content of this page