ಬೆಂಗಳೂರು: ಭಾರತ ಸರ್ಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಉದ್ಯೋಗ ನಿರ್ದೇಶನಾಲಯದ ವತಿಯಿಂದ ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಸರ್ಕಾರದ ಮಾದರಿ ಐಟಿಐ ಕ್ಯಾಂಪಸ್ ನಲ್ಲಿ ಎಸ್.ಸಿ/ಎಸ್.ಟಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ವರ್ಷದ ವಿಶೇಷ ತರಬೇತಿ ನೀಡಲು ಪ್ರತಿಷ್ಠಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಸಿ, ಕೆ.ಪಿ.ಎಸ್.ಸಿ, ಕೆ.ಇ.ಎ ಮತ್ತು ಇತರ ನೇಮಕಾತಿ ಏಜೆನ್ಸಿಗಳು ನಡೆಸುವ ಗ್ರೂಪ್ ‘ಸಿ’ ಮತ್ತು ಸಮಾನ ಹುದ್ದೆಗಳ ಖಾಲಿ ಹುದ್ದೆಗಳಿಗೆ ವಿವಿಧ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸಲು ಸಾಮಾನ್ಯ ಇಂಗ್ಲೀಷ್, ಸಾಮಾನ್ಯ ಜ್ಞಾನ ಮತ್ತು ಸಂಖ್ಯಾತ್ಮಕ ಸಾಮಥ್ರ್ಯ, ಕಂಪ್ಯೂಟರ್, ಬೆರಳಚ್ಚು ಮತ್ತು ಶೀಘ್ರಲಿಪಿ ತರಬೇತಿ ನೀಡಲಾಗಲಿದೆ.
ಆಯ್ಕೆಯಾದ ಸಂಸ್ಥೆಗಳಿಗೆ ವೃತ್ತಿಪರ ಶುಲ್ಕವನ್ನು ಪಾವತಿಸಲಾಗಲಿದೆ. ಈ ಯೋಜನೆಯು 2025ರ ಜುಲೈ 1 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಸಂಸ್ಥೆಗಳು ಮೇ 30ರ ಸಂಜೆ 5 ಗಂಟೆಯ ಒಳಗಾಗಿ ಮೊಹರು ಮಾಡಿದ ಮುಚ್ಚಿದ ಲಕೋಟೆಯಲ್ಲಿ ಪ್ರಸ್ತಾವನೆಗಳನ್ನು ಸರ್ಕಾರದ ಮಾದರಿ ಐಟಿಐ ಕ್ಯಾಂಪಸ್, ಮೊದಲನೇ ಮಹಡಿ, ಸಿಒಇ ಕಟ್ಟಡ, ಡೈರಿ ಸರ್ಕಲ್, ಬೆಂಗಳೂರು-560029 ಇಲ್ಲಿಗೆ ಸಲ್ಲಿಸಬೇಕಿದೆ.
ಹೆಚ್ಚಿನ ವಿವರಗಳಿಗಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವೆಬ್ ಸೈಟ್ www.dge.gov.in, www.ncs.gov.in ಗೆ ಭೇಟಿ ನೀಡಬಹುದಾಗಿದೆ.