ಬೆಂಗಳೂರು: ವಿಕಲಚೇತನ ಕೋಟಾದ ಅಡಿಯಲ್ಲಿ ಸೀಟು ಪಡೆಯಲು ಯುಜಿಸಿಇಟಿ-2025 ಆನ್ ಲೈನ್ ಅರ್ಜಿಯಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಅಂಗವಿಕಲತೆ ಅರ್ಹತೆಯನ್ನು ಪರೀಕ್ಷಿಸಲು ಮೆ. 28, 29 ಮತ್ತು 30 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೈದ್ಯರ ಸಮಿತಿಯಿಂದ ವೈದ್ಯಕೀಯ ತಪಾಸಣೆ ನಡೆಯಲಿದೆ.
ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, ಕೃಷಿ ಬಿಎಸ್‌ಇ, ಬಿ.ಫಾರ್ಮ. ಫಾರ್ಮಾ-ಡಿ, ವೈದ್ಯಕೀಯ ದಂತ ವೈದ್ಯಕೀಯ, ಆರ್ಯುವೇದ, ಯುನಾನಿ ಹೋಮಿಯೋಪತಿ, ಆರ್ಕಿಟೆಕ್ಚರ್, ಬಿಪಿಟಿ, ಬಿಪಿಒ, ಬಿಎಸ್‌ಇ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ನಿಗದಿಪಡಿಸಿರುವ ದಿನಾಂಕಗಳಂದು ಹಾಜರಾಗುವುದಕ್ಕೆ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ನಿಗದಿತ ಲಿಂಕ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕಿದೆ.
ವೈದ್ಯಕೀಯ ನಿಯಮಾ.ನುಸಾರ ಅರ್ಹತೆ ಪಡೆಯುವ ಅಭ್ಯರ್ಥಿಗಳು ಮಾತ್ರ ಆಯಾ ಕೋರ್ಸುಗಳಿಗೆ ನಿಗದಿಪಡಿಸಲಾದ ವಿಕಲಚೇತನ ಕೋಟದ ಅಡಿಯಲ್ಲಿ ಸೀಟು ಪಡೆಯಲು ಪರಿಗಣಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.