Job News

ಮೇ 25 ರಂದು ಕೇಂದ್ರ ಲೋಕ ಸೇವಾ ಆಯೋಗದ ಪೂರ್ವಬಾವಿ ಪರೀಕ್ಷೆ

Share It

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು ಸಿವಿಲ್ ಸರ್ವಿಸ್, ಇಂಜಿನಿಯರಿಂಗ್ ಸರ್ವಿಸ್, ಎನ್‌ಡಿಎ ಸೇರಿ ಮುಂತಾದ ಹುದ್ದೆಗಳಿಗೆ ಮೇ. 25 ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಮೇ 25ರಂದು ನಡೆಯಲಿದೆ.

ಪತ್ರಿಕೆ-1 ಬೆಳಿಗ್ಗೆ 9.30ರಿಂದ 11.30ರವರೆಗೆ ಮತ್ತು ಪತ್ರಿಕೆ-2 ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ನಡೆಯಲಿದ್ದು, ನಾಗರಿಕ ಸೇವಾ ಪರೀಕ್ಷೆ (ಐಎಎಸ್) ಮತ್ತು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯ ಪ್ರವೇಶಪತ್ರಗಳನ್ನು ವೈಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು ಎಂದು ಕೇಂದ್ರ ಲೋಕ ಸೇವಾ ಆಯೋಗ ತಿಳಿಸಿದೆ.

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು https://upsconline.gov.in ಗೆ ಭೇಟಿ ನೀಡಿ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದಿದೆ.


Share It

You cannot copy content of this page