ನವದೆಹಲಿ: ಮೂರು ವರ್ಷಕ್ಕಿಂತ ಪೂರ್ವದ ಜಿಎಸ್‌ಟಿ ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವವರಿಗೆ ಈ ತಿಂಗಳ ಕೊನೆಯವರೆಗೆ ಅವಕಾಶ ಕೊಡಲಾಗಿದ್ದು, ಇಷ್ಟು ಹಳೆಯ ಜಿಎಸ್‌ಟಿ ಫೈಲ್ ಮಾಡಲು ಜೂನ್ 30ಕ್ಕೆ ಡೆಡ್‌ಲೈನ್ ನಿಗದಿ ಮಾಡಲಾಗಿದೆ.
ಜುಲೈ 1 ರಿಂದ ನೀವು ಆ ಮೂರು ವರ್ಷದ ಹಿಂದಿನ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ. ಒಂದು ವೇಳೆ, ಜೂನ್ 30ರೊಳಗೆ ಜಿಎಸ್‌ಟಿ ಸಲ್ಲಿಸದೇ ಇದ್ದರೆ ಆ ತೆರಿಗೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಸಿಗುವುದಿಲ್ಲ. ಇದರ ಜೊತೆಗೆ, ತೆರಿಗೆ ಅಧಿಕಾರಿಗಳು ಮುಂದಿನ ಕ್ರಮಕ್ಕೆ ಮುಂದಾಗಬಹುದಾಗಿದೆ.
ಜುಲೈ 1ರಿಂದ ಮೂರು ವರ್ಷದವರೆಗೆ ಮಾತ್ರ ಜಿಎಸ್‌ಟಿ ಸಲ್ಲಿಸಲು ಅವಕಾಶ ಇರುತ್ತದೆ. ಅದಕ್ಕೂ ಹಿಂದಿನ ತೆರಿಗೆಗೆ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮೂರು ವರ್ಷದ ಗಡುವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಎರಡು ವರ್ಷಕ್ಕೆ ಸೀಮಿತವಾಗಬುದಾಗಿದೆ. ಅಥವಾ ಒಂದು ವರ್ಷಕ್ಕೂ ಸೀಮಿತಗೊಳ್ಳಬಹುದಾಗಿದೆ.
ಒಂದು ವೇಳೆ ಎರಡು ವರ್ಷಕ್ಕ ವಿಂಡೋ ಸೀಮಿತಗೊಳಿಸಲು ನಿರ್ಧಾರವಾದರೆ ಎರಡು ವರ್ಷದಷ್ಟು ಹಿಂದಿನ ಜಿಎಸ್‌ಟಿ ರಿಟರ್ನ್ ಫೈಲ್ ಮಾಡಲು ಆಗುವುದಿಲ್ಲ. ಸದ್ಯ ಇದು ಮೂರು ವರ್ಷ ಗಡುವಿದ್ದು, ಇವತ್ತಿನ (2025ರ ಜೂನ್) ಜಿಎಸ್‌ಟಿ ರಿಟರ್ನ್ ಅನ್ನು ಸಲ್ಲಿಸಲು ನೀವು 2028ರ ಜೂನ್‌ವರೆಗೂ ಸಮಯಾವಕಾಶ ಇರುತ್ತದೆ.