News

ರಾಮಮಂದಿರದ ಎಂಟು ಉಪ ದೇವಾಲಯಗಳಿಗೆ ಪೂಜಾ ಪರಿಕರಗಳು ರವಾನೆ

Share It

ಬೆಂಗಳೂರು: ಅಯೋಧ್ಯೆಯ ರಾಮಮಂದಿರದ ಎಂಟು ಉಪ ದೇವಾಲಯಗಳಿಗೆ ನಗರದ ಶ್ರೀ ರಾಮ ಸೇವಾ ಮಂಡಳಿಯಿಂದ ಬೆಳ್ಳಿಯ ಪೂಜಾ ಪರಿಕರಗಳನ್ನು ಶುಕ್ರವಾರ ರವಾನಿಸಲಾಯಿತು.

ರಾಜಾಜಿನಗರದ ರಾಜಹಂಸ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ ಹೋಮ, ಪೂಜಾ ವಿಧಿ ವಿಧಾನಗಳೊಂದಿಗೆ ಬೆಳ್ಳಿಯ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು. ಅಯೋಧ್ಯೆಯ ರಾಮ ಮಂದಿರದಲ್ಲಿರುವ ಎಂಟು ಸಣ್ಣ ದೇವಸ್ಥಾನಗಳಿಗೆ ನೀಡಲು ಮಂಡಳಿಯ ನೇತೃತ್ವದಲ್ಲಿ ತಲಾ ಸುಮಾರು ಏಳೂವರೆ ಕೆಜಿಯ ಬೆಳ್ಳಿಯ ಪೂಜಾ ಪರಿಕರಗಳನ್ನು ಅರ್ಪಿಸಲಾಯಿತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಎ.ರಾಜೇಂದ್ರ ನಾಯ್ಡು, ಎಂಟು ಜನ ಸ್ನೇಹಿತರು ಸೇರಿಕೊಂಡು ಪೂಜಾ ಪರಿಕರಗಳನ್ನು ಅರ್ಪಿಸುತ್ತೇದ್ದೇವೆ. ನಾವೆಲ್ಲಾ ಒಂದು, ನಾವೆಲ್ಲಾ ಬಂಧು, ನಾವೆಲ್ಲಾ ಹಿಂದು ಘೋಷವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲವು ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿತ್ತು. ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಅದಮ್ಯ ಚೇತನ ಪ್ರತಿಷ್ಠಾನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಡಾ.ಜಯಪ್ರಕಾಶ್ ಉಪಸ್ಥಿತರಿದ್ದರು.


Share It

You cannot copy content of this page