Health News

ಎರಡ್ಮೂರು ದಿನಗಳೊಳಗೆ ಸಲ್ಲಿಕೆಯಾಗಲಿದೆ ಹೃದಯಾಘಾತ ಪ್ರಕರಣಗಳ ತಜ್ಞರ ಸಮಿತಿಯ ವರದಿ

Share It

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಹೃದಯಾಘಾತದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ 10 ಜನರ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ತನ್ನ ವರದಿಯನ್ನು ಎರಡ್ಮೂರು ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಯುವಕರ ಹಠಾತ್ ಸಾವಿನ ಬಗ್ಗೆ ಲಸಿಕೆ ತೆಗೆದುಕೊಂಡವರ 250 ಮಂದಿ ಮೇಲೆ ಈಗಾಗಲೇ ಅಧ್ಯಯನ ಮಾಡಲಾಗಿದ್ದು, ಹೃದಯಘಾತಕ್ಕೆ ಲಸಿಕೆ ಕಾರಣವಾಗಿಲ್ಲ . ಆದರೆ, ಕೋವಿಡ್ ಸೋಂಕು ಕೊಂಚ ಪ್ರಮಾಣದಲ್ಲಿ ಸಮಸ್ಯೆಯಾಗಿದೆ. ವರದಿಯಲ್ಲಿ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆ ಉಲ್ಲೇಖವಾಗಲಿದೆ ಎನ್ನಲಾಗುತ್ತಿದೆ.

ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ ಅತಿಯಾದ ಬೊಜ್ಜು ಪ್ರಮುಖ ಕಾರಣಗಳೆಂದೂ 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಸ್ಕ್ರೀನಿಂಗ್ ಮಾಡುವಂತೆ ಸಲಹೆ ನೀಡಲಾಗಿದೆ. ಎಲ್ಲ ಶಾಲಾ ಮಕ್ಕಳನ್ನು ಹೃದಯದ ತಪಾಷಣೆಗೆ ಒಳಪಡಿಸಬೇಕು ಜತೆಗೆ ಪಠ್ಯಕ್ರಮದಲ್ಲಿ ಹೃದಯಘಾತ ಅಳವಡಿಸಿ, ಹೃದಯಘಾತ ಹಾಗೂ ಸಮಸ್ಯೆಗಳ ಬಗ್ಗೆ ರಿಜಿಸ್ಟರ್ ಪ್ರಾರಂಭಿಸಬೇಕು. ಹೃದಯಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡಬೇಕು. ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಬ್ಲಡ್ ಥಿನ್ನರ್ ಟ್ಯಾಬ್ಲೆಟ್ ಹಾಗೂ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬೆಲ್ಲ ಅಂಶಗಳನ್ನು ತಜ್ಞರ ಸಮಿತಿಯು ವರದಿಯಲ್ಲಿ ಉಲ್ಲೇಖಿಸಲಾಗಲಿದೆ ಎಂದು ತಿಳಿದುಬಂದಿದೆ.

ಜತೆಗೆ, ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಡಿಯಾಲಜಿಸ್ಟ್‌ಗಳ ನೇಮಕಾತಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ವೈದ್ಯಕೀಯ ತಜ್ಞರ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣದ ಚಿಕಿತ್ಸೆ ಲಭ್ಯವಾಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ಹೃದಯಾಘಾತದ ಕುರಿತಾದ ದಾಖಲಾತಿಗಳನ್ನು ರಿಜಿಸ್ಟರ್‌ನಲ್ಲಿ ದಾಖಲಿಸುವ ಮೂಲಕ ಡೇಟಾಬೇಸ್ ರಚಿಸುವ ಸಲಹೆಯೂ ವರದಿಯಲ್ಲಿರಲಿದೆ. ಇದು ರಾಜ್ಯದಾದ್ಯಂತ ಹೃದಯಾಘಾತದ ಪ್ರಕರಣಗಳನ್ನು ಗಮನಿಸಲು ಮತ್ತು ತಡೆಗಟ್ಟುವ ಕಾರ್ಯಕ್ರಮಗಳನ್ನು ಯೋಜಿಸಲು ಸಹಾಯಕವಾಗಲಿದೆ. ಕೋವಿಡ್ ಲಸಿಕೆಯ ದುಷ್ಪರಿಣಾಮಗಳ ಬಗ್ಗೆಯೂ ತನಿಖೆ ನಡೆಸಲು ಸಮಿತಿಯು ಶಿಫಾರಸ್ಸು ಮಾಡಲಿದೆ.


Share It

You cannot copy content of this page