News

ಅಧಿಕಾರ ದುರುಪಯೋಗ: ಗ್ರಾ.ಪಂ. ಪಿಡಿಒ ಅಮಾನತು

Share It

ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಮೇಲೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಅನುರಾಧ ಅವರು ಪಿಡಿಓ ಸಿ.ಮುನಿರಾಜು ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಗ್ರಾಪಂಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸಿ.ಮುನಿರಾಜು ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 22 ರಂದು ಅಮಾನತ್ತು ಸಿಇಓ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಅಮಾನತ್ತುಗೊಂಡಿರುವ ಅಧಿಕಾರಿ ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸಮೇತನಹಳ್ಳಿ ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಹೊಸಕೋಟೆ ತಾಲ್ಲೂಕು ಸಮೇತನಹಳ್ಳಿ ಗ್ರಾಪಂಯಲ್ಲಿ ಇ ಸ್ವತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿಗಳು ನಿರ್ವಹಿಸಬೇಕಾಗಿರುವ ಕಾರ್ಯ ವಿಧಾನವನ್ನು ಕ್ರಮ ಬದ್ಧವಾಗಿ ನಿರ್ವಹಿಸದೇ ರಾಫೆಲ್ ರೆಸಿಡೆನ್ಸಿ ವಿಲ್ಲಾಗಳಿಗೆ ಭೇಟಿ ನೀಡದೆ ಹಾಗೂ ವಿಲ್ಲಾಗಳ ಕಟ್ಟಡ ನಿರ್ಮಾಣದ ಸ್ಥಿತಿಯನ್ನು ಪರಿಶೀಲಿಸದೇ ಮತ್ತು ನೈಜತೆ ಇಲ್ಲದ ಛಾಯಾಚಿತ್ರಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿರುವ ಆರೋಪಕ್ಕೆ ಪಿಡಿಓ ಸಿಲುಕಿದ್ದಾರೆ. ಈ ಬೇಜವಾಬ್ದಾರಿ, ಕರ್ತವ್ಯ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಪಿಡಿಓ ಅಮಾನತ್ತು ಮಾಡಿ ಸಿಇಓ ಆದೇಶ ಹೊರಡಿಸಿದ್ದಾರೆ.


Share It

You cannot copy content of this page