ಬೆಂಗಳೂರು: ಕೋವಿಡ್ ಸೇರಿದಂತೆ ಯಾವುದೇ ವೈರಾಣು ಸೋಂಕುಗಳ ಪತ್ತೆಗೆ ನಡೆಸಲಾಗುವ ಪರೀಕ್ಷೆಗೆ 1,700 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ವೈರಾಣು ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಇದು ಅನ್ವಯವಾಗಲಿದೆ.
ರಾಜ್ಯದ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಪ್ರಯೋಗಾಲಯಗಳು ಸಾಮಾನ್ಯ ಜ್ವರಕ್ಕೂ ಗಂಟಲ ದ್ರವದ ಮಾದರಿಗಳನ್ನು ಪಡೆದು ಪ್ಯಾನೆಲ್ ಕಿಟ್‌ಗಳನ್ನು ಬಳಸಿ, ಪರೀಕ್ಷೆ ನಡೆಸಿರುವುದು ಗಮನಕ್ಕೆ ಬಂದಿದೆ. ಈ ರೀತಿ ಪರೀಕ್ಷೆಗಳಿಗೆ 8 ರಿಂದ 10 ಸಾವಿರ ರೂ.ವರೆಗೆ ಹಣ ಪಡೆಯಲಾಗುತ್ತಿದ್ದು, ಆದ್ದರಿಂದ ದರ ನಿಗದಿಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.